ಬೆಂಗಳೂರು : ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟ ದರ್ಶನ್ ಅವರು, ಜೈಲೂಟಕ್ಕೆ ಒಗ್ಗಿಕೊಳ್ಳದೆ ಮನೆ ಊಟ, ಬಟ್ಟೆ, ಹಾಸಿಗೆ ಕೋರಿ ಅರ್ಜಿ ಸಲ್ಲಿಸಿದ್ದರು. ಇಂದು ಹೈಕೋರ್ಟ್ ವಿಚಾರಣೆ ನಡೆಸಿ ಆಗಸ್ಟ್ 20 ಕ್ಕೆ ವಿಚಾರಣೆ ಮುಂದೂಡಿತು. ಆದರೆ ಇದೀಗ ಹುಬ್ಬಳ್ಳಿಯಿಂದ ನಟ ದರ್ಶನ್ ಅವರಿಗೆ ಸಿದ್ಧಾರೂಢರ ಚರಿತ್ರೆ ಇರುವ ಪುಸ್ತಕ ಕೊರಿಯರ್ ಮಾಡಲಾಗಿದೆ.
ಹೌದು ಹುಬ್ಬಳ್ಳಿಯಿಂದ ಪರಪ್ಪನ ಅಗ್ರಹಾರ ಜೈಲಿಗೆ ಪುಸ್ತಕ ಸಿದ್ದಾರೂಢರ ಚರಿತ್ರೆಯ ಪುಸ್ತಕ ಕೊರಿಯರ್ ಮಾಡಲಾಗಿದೆ. ಸಿದ್ಧಾರೂಢ ಮಠದ ಧರ್ಮದರ್ಶಿಗಳಾದ ಗೋವಿಂದ ಮಣ್ಣೂರ ಅವರಿಂದ ಇದೀಗ ಕೊರಿಯರ್ ಮಾಡಲಾಗಿದೆ2011 ರಲ್ಲಿ ಐತಿಹಾಸಿಕ ಸಿದ್ಧಾರೂಢರ ಮಠಕ್ಕೆ ದರ್ಶನ್ ಭೇಟಿ ನೀಡಿದರು. ಇದೀಗ ಕೊಲೆ ಆರೋಪಿ ದರ್ಶನಗೆ ಸಿದ್ಧಾರೂಢರ ಪುಸ್ತಕ ಕೊರಿಯರ್ ಮಾಡಲಾಗಿದೆ.
ಇನ್ನೂ ಮನೆ ಊಟಕ್ಕಾಗಿ ಅರ್ಜಿ ಸಲ್ಲಿಸಿದ್ದ ಆರೋಪಿ ನಟ ದರ್ಶನ್ ಅವರ ಅರ್ಜಿಯನ್ನು ಬೆಂಗಳೂರಿನ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ವಿಚಾರಣೆ ನಡೆಸಿ ಅರ್ಜಿಯನ್ನು ವಜಾಗೊಳಿಸಿತ್ತು. ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ದರ್ಶನ್ ಪರ ವಕೀಲರು ಹೈಕೋರ್ಟ್ ಮೊರೆ ಹೋಗಿದ್ದರು. ಇಂದು ಹೈಕೋರ್ಟ್ ವಿಚಾರಣೆ ನಡೆಸಿ ಆಗಸ್ಟ್ 20 ಕ್ಕೆ ವಿಚಾರಣೆಯನ್ನು ಮುಂದೂಡಿತು.