ಚಿತ್ರದುರ್ಗ : ನಾಗಮಂಗಲ ಗಲಭೆ ಪ್ರಕರಣ ಮಾಸುವ ಮುನ್ನವೇ ರಾಜ್ಯದಲ್ಲಿ ಮತ್ತೊಂದು ಘಟನೆ ನಡೆದಿದ್ದು, ಚಿತ್ರದುರ್ಗದಲ್ಲಿ ಈದ್ ಮಿಲಾದ್ ಸಂದರ್ಭದಲ್ಲಿ ಕೆಲವು ಮುಸ್ಲಿಮರು ಪ್ಯಾಲೆಸ್ತೆನ್ ಪರ ಘೋಷಣೆ ಹೋಗಿರುವ ಘಟನೆ ನಡೆದಿದೆ.
ಹೌದು ಈದ್ ಮಿಲಾದ ಮೆರವಣಿಗೆ ವೇಳೆ ಪ್ಯಾಲೇಸ್ತೇನ್ ಪರ ಘೋಷಣೆ ಕೂಗಿದ್ದು, ಚಿತ್ರದುರ್ಗ ನಗರದ ಗಾಂಧೀಜಿ ವೃತ್ತದ ಮೆರವಣಿಗೆಯಲ್ಲಿ ಕೆಲವರಿಂದ ಪ್ಯಾಲೆಸ್ತೇನ್ ಪರ ಘೋಷಣೆ ಕೂಗಲಾಯಿತು. ಪ್ಯಾಲೆಸ್ತೇನ್ ಜಿಂದಾಬಾದ್ ಎಂದು ಘೋಷಣೆ ಕೆಲವರು ಕೂಗಿದ್ದಾರೆ. ಚಿತ್ರದುರ್ಗ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.