ಬಾಗಲಕೋಟೆ : ಇತ್ತೀಚಿಗೆ ಈದ್ ಮಿಲಾದ್ ಹಬ್ಬದ ದಿನದಂದು ಕೆಲವು ಕಿಡಿಗೇಡಿಗಳು ಪ್ಯಾಲೇಸ್ಥಿನ್ ಧ್ವಜ ಹಾರಾಟ ನಡೆಸಿದ್ದ ಪ್ರಕರಣ ನಡೆದಿತ್ತು. ಇದೀಗ ಬಾಗಲಕೋಟೆಯಲ್ಲಿ ಈದ್ ಮಿಲಾದ್ ಹಬ್ಬದ ನೆಪದಲ್ಲಿ ಮುಸ್ಲಿಂ ಯುವಕರು ಪಾಕಿಸ್ತಾನ ಧ್ವಜ ಸೇರಿದಂತೆ ಇಸ್ಲಾಮಿಕ್ ಧ್ವಜಗಳನ್ನು ಹೋರಾಟ ನಡೆಸಿ ಪುಂಡಾಟ ಮೆರೆದಿದ್ದಾರೆ.
ಹೌದು ಈದ್ ಮಿಲಾದ್ ಹಬ್ಬದ ನೆಪದಲ್ಲಿ ಶತ್ರು ದೇಶವಾದ ಪಾಕಿಸ್ತಾನ ಸೇರಿದಂತೆ ಇನ್ನಿತರ ಇಸ್ಲಾಮಿಕ್ ಧ್ವಜಗಳ ಹಾರಾಟ ನಡೆಸಿರುವ ಘಟನೆ ಬಾಗಲಕೋಟೆ ಜಿಲ್ಲೆಯಲ್ಲಿ ನಡೆದಿದೆ. ಎರಡು ದಿನಗಳ ಹಿಂದೆ ಯುವಕನೊಬ್ಬ ತನ್ನ ವಾಟ್ಸಪ್ ಸ್ಟೇಟಸ್ ನಲ್ಲಿ ಚಲಿಸುತ್ತಿದ್ದ ಕಾರಿನ ಮೇಲೆ ಪಾಕಿಸ್ತಾನ ಧ್ವಜ ಹಾರಾಡುತ್ತಿರುವ ಸ್ಟೇಟಸ್ ಹಾಕಿದ್ದ.
ಇದೀಗ ಧ್ವಜ ಹಿಡಿದು ಕೆಲವು ಮುಸ್ಲಿಂ ಪುಂಡರು ಪಾಕಿಸ್ತಾನ ಸೇರಿದಂತೆ ಇಸ್ಲಾಮಿಕ್ ದೇಶದ ಧ್ವಜಗಳನ್ನ ಹಾರಾಟ ನಡೆಸಿದ್ದಾರೆ. ಬಾಗಲಕೋಟೆ ಜಿಲ್ಲೆಯಲ್ಲಿ ಮೂರು ದಿನಗಳಲ್ಲಿ ಇದೀಗ ನಾಲ್ಕು ಪ್ರಕರಣಗಳು ಬೆಳಕಿಗೆ ಬಂದಿವೆ.