ಕಲಬುರ್ಗಿ : ಕಲಬುರ್ಗಿಯಲ್ಲಿ ಇಂದು ರಾಷ್ಟ್ರಧ್ವಜದ ಸ್ತಂಭದಲ್ಲಿ ಮುಸ್ಲಿಂ ಧ್ವಜ ಹಾರಿಸಿದ್ದ ಘಟನೆ ನಡೆದಿದ್ದು ಈ ಕುರಿತಾಗಿ ಕಲ್ಬುರ್ಗಿ ನಗರದ ಚೌಕ್ ಪೊಲೀಸ್ ಠಾಣೆಗೆ ಕೆಲವು ಮುಸ್ಲಿ ಮುಖಂಡರೇ ಈ ಕುರಿತು ದೂರು ನೀಡಿರುವ ಘಟನೆ ನಡೆದಿದೆ.
ಹೌದು ಮುಸ್ಲಿಂ ಧ್ವಜದ ಕೆಳಗೆ ರಾಷ್ಟ್ರಧ್ವಜ ಇಟ್ಟು ಅಪಮಾನ ಮಾಡಿದ ಆರೋಪ ಇದೀಗ ಕೇಳಿಬಂದಿದ್ದು, ಈ ಕುರಿತು ಮುಸ್ಲಿಂ ಮುಖಂಡರೇ ಚೌಕ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಕಲ್ಬುರ್ಗಿ ಶೇಕ್ ರೋಜಾ ದರ್ಗಾದಲ್ಲಿ ಈ ಒಂದು ಘಟನೆ ನಡೆದಿದೆ.
ನಿನ್ನೆ ಶೇಖ್ ರೋಜಾ ದರ್ಗಾದಲ್ಲಿ ಸಾಮೂಹಿಕ ವಿವಾಹ ವೇಳೆ ಧ್ವಜಾರೋಹಣ ನೆರವೇರಿಸಲಾಗಿತ್ತು. ಮುಸ್ಲಿಂ ಧ್ವಜದ ಕೆಳಗೆ ರಾಷ್ಟ್ರಧ್ವಜ ಇಟ್ಟು ಅವಮಾನ ಮಾಡಿದ್ದ ಆರೋಪ ಕೇಳಿ ಬಂದಿತ್ತು. ಈ ಬಗ್ಗೆ ಚೌಕ ಪೊಲೀಸ್ ಠಾಣೆಗೆ ಕೆಲವು ಮುಖಂಡರಿಂದಲೇ ದೂರು ಸಲ್ಲಿಕೆಯಾಗಿತ್ತು.