ಬೆಂಗಳೂರು : ನಟ ದರ್ಶನ್ ಅಭಿಮಾನಿಗಳು ನಟ ಪ್ರಥಮ್ ಗೆ ಕೊಲೆ ಬೆದರಿಕೆ ಹಾಕಿರುವ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಮತ್ತಷ್ಟು ಸ್ಪೋಟಕ ವಿಷಯಗಳು ಬಹಿರಂಗವಾಗಿದ್ದು, ರೌಡಿಶೀಟರ್ ಬೇಕರಿ ರಘು ಮತ್ತು ಗ್ಯಾಂಗ್ನಿಂದ ಪ್ರಥಮ್ ಗೆ ಕೊಲೆ ಬೆದರಿಕೆ ಹಾಕಲಾಗಿದೆ ಎಂದು ತಿಳಿದುಬಂದಿದೆ. ಹೌದು ರಾಮಾಯಣಪಾಳ್ಯ ಬಳಿ ರೇಣುಕಾ ಎಲ್ಲಮ್ಮ ದೇವಸ್ಥಾನದ ಹಿಂದೆ ಬೆದರಿಕೆ ಹಾಕಲಾಗಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಗ್ರಾಮಕ್ಕೆ ಜುಲೈ 22ರಂದು ಪ್ರಥಮ್ ರೇಣುಕಾ ಎಲ್ಲಮ್ಮ ದೇವಸ್ಥಾನಕ್ಕೆ ಹೋಗಿದ್ದರು. ಈ ವೇಳೆ ರಕ್ಷಕ್ ಬುಲೆಟ್ ಜೊತೆಗೆ ಪ್ರಥಮ್ ರೇಣುಕಾ ಎಲ್ಲಮ್ಮ ದೇಗುಲಕ್ಕೆ ತೆರಳಿದ್ದರು. ರೇಣುಕಾ ಎಲ್ಲಮ್ಮ ದೇವಸ್ಥಾನದ ಹಿಂದೆ ಬರ್ತಡೇ ಪಾರ್ಟಿ ಆಯೋಜನೆ ಮಾಡಲಾಗಿತ್ತು. ರೌಡಿಶೀಟರ್ ಬೇಕರಿ ರಘು ಬರ್ತಡೇ ಪಾರ್ಟಿಯನ್ನು ಆತನ ಸಹಚರರು ಆಯೋಜಿಸಿದ್ದರು.
ದೇಗುಲಕ್ಕೆ ತೆರಳಿದ್ದ ರಕ್ಷಕನನ್ನು ಬೇಕರಿ ರಘು ಸಹಜರರು ಮಾತನಾಡಿಸಿದ್ದಾರೆ. ಈ ವೇಳೆ ಬೇಕರಿ ರಘು ಬರ್ತಡೇ ಪಾರ್ಟಿ ಇದೆ ಎಂದು ಕರೆದೊಯ್ದಿದ್ದರು. ರೌಡಿಶೀಟರ್ ಬೇಕರಿ ರಘುಗಳಿಗೆ ಆತನ ಸಹಜರರು ರಕ್ಷಕ್ ಬುಲೆಟ್ ನನ್ನು ಕರೆದುಕೊಂಡು ಹೋಗಿದ್ದಾರೆ. ಜೂನ್ 26ರಂದು ರೌಡಿಶೀಟರ್ ರಘು ಬರ್ತಡೇ ಇತ್ತು ಒಂದು ಆಂಧ್ರಪ್ರದೇಶಕ್ಕೆ ತೆರಳಿದ್ದರಿಂದ ಜುಲೈ 22 ರಂದು ಬರ್ತಡೆ ಪಾರ್ಟಿ ಆಯೋಜನೆ ಮಾಡಲಾಗಿತ್ತು. ದೇವಸ್ಥಾನದ ಹಿಂದೆ ಬಾಡೂಟ ಎಣ್ಣೆ ಪಾರ್ಟಿ ಆಯೋಜನೆ ಮಾಡಲಾಗಿತ್ತು.