ಮೈಸೂರು : ಸದ್ಯ ರಾಜ್ಯ ರಾಜಕೀಯದಲ್ಲಿ ಹನಿಟ್ರ್ಯಾಪ್ ವಿಚಾರ ಭಾರಿ ಸದ್ದು ಮಾಡುತ್ತಿದ್ದು, ಇದರ ಬೆನ್ನಲ್ಲೆ ವಿಪಕ್ಷ ನಾಯಕ ಆರ್ ಅಶೋಕ್ ನನ್ನ ಮೊಬೈಲ್ ಸೇರಿದಂತೆ ವಿಪಕ್ಷದ ಎಲ್ಲಾ ನಾಯಕರ ಫೋನ್ ಕದ್ದಾಲಿಕೆ ನಡೆಯುತ್ತಿದೆ ಎಂದು ಮತ್ತೊಂದು ಗಂಭೀರ ಆರೋಪ ಮಾಡಿದ್ದರು. ಇದೀಗ ಮೈಸೂರಿನಲ್ಲಿ ಕಾಂಗ್ರೆಸ್ ವಕ್ತಾರ ಎಂಬ ಲಕ್ಷ್ಮಣ್ ಮತ್ತೊಂದು ಹೊಸ ಬಾಂಬ್ ಸಿಡಿಸಿದ್ದು ಬಿಜೆಪಿ ಶಾಸಕ ಮುನಿರತ್ನ 30 ಮಾಜಿ ಸಚಿವರಿಗೆ ಎಚ್ಐವಿ ಇಂಜೆಕ್ಷನ್ ಕೊಡಿಸಿದ್ದಾನೆ ಎಂದು ಸ್ಪೋಟಕ ಹೇಳಿಕೆ ನೀಡಿದ್ದಾರೆ.
ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ವಿಪಕ್ಷ ನಾಯಕ ಆರ್. ಅಶೋಕಗೆ ಮುನಿರತ್ನ ನೂರಕ್ಕೆ ನೂರರಷ್ಟು ಎಚ್ಐವಿ ಇಂಜೆಕ್ಷನ್ ನೀಡಿದ್ದಾನೆ. ಎಚ್ಐವಿ ಇಂಜೆಕ್ಷನ್ ನೀಡಿರುವುದರಿಂದ ಆರ್.ಅಶೋಕ್ ಬಣ್ಣ ಬದಲಾಗಿದೆ. ಆರ್ ಅಶೋಕ್ ತುಟಿ ಮೊದಲಿನಂತೆ ಇಲ್ಲ. ಕೈ ಬಣ್ಣ ಸಹ ಬದಲಾಗಿದೆ. ವಿಪಕ್ಷ ನಾಯಕ ಆರ್ ಅಶೋಕ್ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದರು.
ಅಲ್ಲದೇ ಬಿಜೆಪಿ ಶಾಸಕ ಮುನಿರತ್ನ ಬಳಿ ಸುಮಾರು 200 ಜನರ ಸಿಡಿ ಇದೆ 30 ಮಾಜಿ ಸಚಿವರಿಗೆ ಮುನಿರತ್ನ ಎಚ್ ಐ ವಿ ಇಂಜೆಕ್ಷನ್ ಕೊಡಿಸಿದ್ದಾನೆ. ಮುನಿರತ್ನನನ್ನು ಒದ್ದು ಬಾಯಿ ಬಿಡಿಸಿದರೆ ಎಲ್ಲಾ ಹೊರಗಡೆ ಬರುತ್ತದೆ ಎಂದು ಮೈಸೂರಿನಲ್ಲಿ ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ ಆಗ್ರಹಿಸಿದ್ದಾರೆ.