ಹಾಸನ : 50 ಸಾವಿರ ರೂಪಾಯಿ ಲಂಚ ಸ್ವೀಕರಿಸುವ ಸಂದರ್ಭದಲ್ಲಿ ನಗರಸಭೆಯ ಆಯುಕ್ತ ಹಾಗೂ ಎಇಇ ಅಧಿಕಾರಿಯು ಒಬ್ಬ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿರುವ ಘಟನೆ ಹಾಸನದಲ್ಲಿ ನಡೆದಿದೆ.
ಹೌದು 50 ಸಾವಿರ ಲಂಚ ಸ್ವೀಕರಿಸುವ ವೇಳೆ ಹಾಸನ ನಗರಸಭೆ ಆಯುಕ್ತ ಹಾಗೂ ಎಇಇ ಬಲೆಗೆ ಬಿದ್ದಿದ್ದಾರೆ. 50 ಸಾವಿರ ಸ್ವೀಕರಿಸುತ್ತಿರುವಾಗ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬೆಲೆಗೆ ಬಿದ್ದಿದ್ದಾರೆ ಎಂದು ತಿಳಿದುಬಂದಿದೆ.ಆಯುಕ್ತ ನರಸಿಹಮೂರ್ತಿ, ಎಇಇ ವೆಂಕಟೇಶ್ ಕೆ ಆರ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಈ ವೇಳೆ ಲೋಕಾಯುಕ್ತ ಬಲೆಗೆ ಬಿದ್ದಂತಹ ಅಧಿಕಾರಿಗಳ ರಕ್ಷಣೆಗೆ ಕೌನ್ಸಿಲರ್ ಗಳು ನಿಂತಿದ್ದಾರೆ. ವೆಂಕಟೇಶ್ವರ ನಗರಸಭೆಯ ಸದಸ್ಯರು ವಕಾಲತ್ತು ವಹಿಸಿದರು. 50,000 ಲಂಚ ಪಡೆದಿದ್ದರಲ್ಲಿ ಎಇಇ ವೆಂಕಟೇಶ್ ಪಾತ್ರ ಏನು ಇಲ್ಲ ನಗರಸಭೆ ಆಯುಕ್ತರ ಸೂಚನೆ, ಮೇರೆಗೆ ಲಂಚ ಪಡೆದಿದ್ದಾರೆ ಎಂದು ಸದಸ್ಯರು ಹೇಳಿದರು.
ಈ ವೇಳೆ ಲೋಕಾಯುಕ್ತ ಪಿಐ ಬಾಲು ನಗರಸಭೆ ಸದಸ್ಯರಿಗೆ ಎಚ್ಚರಿಕೆ ನೀಡಿದರು. ನಾವು ಅಮಾಯಕರ ಮೇಲೆ ದಾಳಿ ಮಾಡಿಲ್ಲ. ಲಂಚ ಸ್ವೀಕರಿಸಿದ್ದೆ ಎಇಇ ಕೆ ಆರ್ ವೆಂಕಟೇಶ್ ಅವರು ಸಹ ಇದರಲ್ಲಿ ಆರೋಪಿಯಾಗಿದ್ದಾರೆ.ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳುತ್ತೇವೆ ನೀವು ಆಯುಕ್ತರ ಸೂಚನೆ ಮೇರೆಗೆ ಲಂಚ ಪಡೆದಿದ್ದಾರೆ ಎಂದು ಹೇಳುತ್ತಿದ್ದೀರಿ.
ಈ ವೇಳೆ ಎಇಇ, ನಗರ ಸಭೆ ಆಯುಕ್ತರ ಮಾತು ಕೇಳುವುದನ್ನು ಕಡಿಮೆ ಮಾಡಲು ಹೇಳಿ ಹಾಸನ ನಗರಸಭೆ ಸದಸ್ಯರಿಗೆ ಲೋಕಾಯುಕ್ತ ಇನ್ಸ್ಪೆಕ್ಟರ್ ಬಾಲು ಇದೇ ವೇಳೆ ತರಾಟೆ ತೆಗೆದುಕೊಂಡರು. ಪಿಐ ಬಾಲು ತಾರಾಟೆಯಿಂದ ನಗರಸಭೆಯ ಸದಸ್ಯರು ಮುಜುಗರಕ್ಕೆ ಒಳಗಾದರು. ಮರು ಮಾತನಾಡದೆ ನಗರಸಭೆ ಸದಸ್ಯರು ಸ್ಥಳದಿಂದ ಕಾಲ್ಕಿತ್ತಿದ್ದಾರೆ.