ಗದಗ : ಲೈಂಗಿಕ ಕಿರುಕುಳದ ಆರೋಪದ ಹಿನ್ನೆಲೆಯಲ್ಲಿ ಮುಂಡರಗಿ ಪುರಸಭೆ ಅಧ್ಯಕ್ಷೆಯ ಪತಿಯನ್ನು ಮಹಿಳೆಯರು ಮನೆಗೆ ಕರೆಸಿಕೊಂಡು ಥಳಿಸಿರುವ ಘಟನೆ ನಡೆದಿದೆ.
ಗದಗ ಜಿಲ್ಲೆಯ ಮುಂಡರಗಿ ಪಟ್ಟಣದಲ್ಲಿ ಪುರಸಭೆ ಅಧ್ಯಕ್ಷೆಯಾಗಿರುವ ಕವಿತಾ ಅವರ ಪತಿ ಅಂದಪ್ಪ ಉಳ್ಳಾಗಡ್ಡಿಗೆ ಮಹಿಳೆಯರು ಮನೆಗೆ ಕರೆಸಿಕೊಂಡು ಥಳಿಸಿರುವ ಘಟನೆ ನಡೆದಿದೆ.
ಅಂದಪ್ಪ ಉಳ್ಳಾಗಡ್ಡಿ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಮಹಿಳೆಯರು ಎಲ್ಲಾರು ಒಟ್ಟಾಗಿ ಸೇರಿಕೊಂಡು ಮನೆಗೆ ಕರೆಸಿಕೊಂಡಿದ್ದಾರೆ. ಬಳಿಕ ಅಂದಪ್ಪ ಉಳ್ಳಾಗಡ್ಡಿಯನ್ನು ಮಹಿಳೆಯರೇ ಥಳಿಸಿದ್ದಾರೆ.