ಬೆಂಗಳೂರು : ಸಿಎಂ ಸಿದ್ದರಾಮಯ್ಯ ವಿರುದ್ಧ ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಮುಡಾ ಹಗರಣದ ತನಿಖಾ ವರದಿಯನ್ನು ಲೋಕಾಯುಕ್ತ ಅಧಿಕಾರಿಗಳು ಕೊನೆಗೂ ಸಿದ್ಧಪಡಿಸಿಕೊಂಡಿದ್ದಾರೆ. ಲೋಕಾಯುಕ್ತ ಅಧಿಕಾರಿಗಳ ತನಿಖಾ ವರದಿಯಲ್ಲಿ 550 ಪುಟಗಳನ್ನು 5 ಭಾಗವಾಗಿ ವಿಂಗಡನೆ ಮಾಡಲಾಗಿದೆ ಎಂದು ತಿಳಿದುಬಂದಿದೆ.
ದೇವರಾಜುಗೆ ಹೇಗೆ ಜಮೀನು ನೀಡಲಾಯಿತು. ಜಮೀನಿನ ಡಿನೋಟಿಫಿಕೇಶನ್ ಹೇಗೆ ಆಯಿತು, ಭೂ ಪರಿವರ್ತನೆ ಹೇಗೆ ಆಯಿತು ಎನ್ನುವ ಬಗ್ಗೆ ವರದಿಯಲ್ಲಿ ಉಲ್ಲೇಖಿಸಲಾಗಿದ್ದು, ಸಿಎಂ ಪತ್ನಿ ಪಾರ್ವತಿಗೆ ಜಮೀನು ನೀಡಿರುವ ಕುರಿತು ಸಿಎಂ ಹಾಗೂ ಕುಟುಂಬದ ಬಗ್ಗೆ ಇರುವ ದಾಖಲೆಗಳು ಕುರಿತು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ವರದಿಯಲ್ಲಿ 100ಕ್ಕೂ ಹೆಚ್ಚು ಅಧಿಕಾರಿಗಳಿಂದ ಮಾಹಿತಿ ಸಂಗ್ರಹವಾಗಿದೆ. ವಿಚಾರಣೆ ಮಾಡಿ ಲೋಕಾಯುಕ್ತ ಪೊಲೀಸರು ಇದೀಗ ಮಾಹಿತಿಗಳನ್ನು ಕಲೆಹಾಕಿದ್ದಾರೆ. ಮುಡಾದ ಮಾಜಿ ಆಯುಕ್ತ, ಮಾಜಿ ತಹಸೀಲ್ದಾರ್ ಹಾಗೂ ಅಧಿಕಾರಿಗಳ ಹೇಳಿಕೆಗಳನ್ನು ಕೂಡ ದಾಖಲಿಸಿಕೊಂಡಿದ್ದಾರೆ. ಅಲ್ಲದೆ ಆರೋಪಿಗಳ ಹೇಳಿಕೆ ಸೇರಿ ಎಲ್ಲವನ್ನು ಒಳಗೊಂಡಿರುವ ವರದಿ ಸಿದ್ದಪಡಿಸಿಕೊಂಡಿದ್ದಾರೆ.
ಮುಡಾದಲ್ಲಿ ಜಮೀನು ಕಳೆದುಕೊಂಡವರಿಗೆ ಪರಿಹಾರ ನೀಡಿಲ್ಲ. ಪರಿಹಾರವನ್ನು ನೀಡಿಲ್ಲ ಎನ್ನುವುದರ ಬಗ್ಗೆ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಕೆಲವೊಂದು ದಾಖಲೆಗಳು 14 ಸೈಟ್ ನೀಡಿರುವ ಬಗ್ಗೆ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಯಾವುದೇ ರಾಜಕೀಯ ಒತ್ತಡಕ್ಕೆ ಒಳಗಾಗಿರುವಂತೆ ಕಂಡುಬಂದಿಲ್ಲ. ಕೆಲ ಅಧಿಕಾರಿಗಳು ನಿಯಮಗಳನ್ನು ಗಾಳಿಗೆ ತೂರಿರುವುದು ಪತ್ತೆಯಾಗಿದೆ.
ಯಾವ ಅಧಿಕಾರಿಗಳು ತಪ್ಪು ಮಾಡಿದ್ದಾರೆ? ಅಲ್ಲದೆ ಯಾವ ಸಮಯದಲ್ಲಿ ತಪ್ಪು ಆಗಿದೆ? ಎನ್ನುವುದರ ಕುರಿತು ಉಲ್ಲೇಖಿಸಲಾಗಿದೆ.ಮುಡಾದಲ್ಲಿ 14 ಸೈಟ್ ನೀಡುವುದು ಅವಶ್ಯಕತೆ ಇಲ್ಲದಿದ್ದರೂ ನೀಡಿರುವುದು ಕಂಡು ಬಂದಿದೆ. ಯಾರು ಸೈಟ್ ನೀಡಬೇಕು ಎಂದು ಮನವಿ ಮಾಡಿದ್ದರೋ ಅವರಿಗೆ ಸೈಟ್ ಹಂಚಿಕೆಯಾಗಿದೆ. ಮನವಿ ಮಾಡಿದವರಿಗೆ ಸಾವಿರಕ್ಕೂ ಹೆಚ್ಚು ಪರ್ಯಾಯ ಸೈಟುಗಳನ್ನು ನೀಡಲಾಗಿದೆ ಎಂದು ವರದಿಯಲ್ಲಿ ಉಲ್ಲೆಖವಾಗಿದೆ.
1) ದೇವರಾಜುಗೆ ಜಮೀನು ಬಂದಿರುವ ಹಿನ್ನೆಲೆಗಳ ಬಗ್ಗೆ
2) ಜಮೀನಿನ ಡಿ ನೋಟಿಫಿಕೇಷನ್ ಹೇಗೆ ಆಯಿತು
3) ಭೂ ಪರಿವರ್ತನೆ ಹೇಗೆ ಆಯಿತು
4) ಸಿಎಂ ಪತ್ನಿ ಪಾರ್ವತಿಗೆ ಜಮೀನು ನೀಡಿರುವ ಬಗ್ಗೆ
5) ಮುಡಾ ಸೈಟ್ ವಾಪಸ್ ಹಾಗೂ ಬಳಿಕ ನಡೆದ ಬೆಳವಣಿಗೆಗಳು ಎಂದು ಹೀಗೆ ಐದು ಭಾಗಗಳಾಗಿ ವರದಿಯನ್ನು ವಿಂಗಡನೆ ಮಾಡಲಾಗಿದೆ.