ಧಾರವಾಡ : ಮುಡಾ ಹಗರಣಕ್ಕೆ ಸಂಬಂಧಪಟ್ಟಂತೆ ಜಾರಿ ನಿರ್ದೇಶನಾಲಯ ಅಧಿಕಾರಿಗಳು ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿಗೆ ಸಮನ್ಸ್ ಜಾರಿಗೊಳಿಸಿತ್ತು. ಇದೀಗ ಈ ಒಂದು ಸಮನ್ಸ್ ಪ್ರಶ್ನಿಸಿ ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿ ಅವರು ಹೈಕೋರ್ಟ್ ಗೆ ರಿಟ್ ಅರ್ಜಿ ಸಲ್ಲಿಸಿದ್ದು, ಧಾರವಾಡ ಹೈಕೋರ್ಟ್ ಪೀಠದಲ್ಲಿ ಇಂದು ರಿಟ್ ಅರ್ಜಿ ವಿಚಾರಣೆ ನಡೆಯಿತು.ಅರ್ಜಿಯ ವಿಚಾರಣೆ ನಡೆಸಿದ ನ್ಯಾ.ಎಂ.ನಾಗಪ್ರಸನ್ನ ಅವರು, ಇಡೀ ತನಿಖೆಗೆ ತಡೆಯಾಜ್ಞೆಯನ್ನು ವಿಸ್ತರಿಸಿದೆ. ಸಿಎಂ ಪತ್ನಿ ಪಾರ್ವತಿ ಹಾಗೂ ಸಚಿವ ಭೈರತಿ ಸುರೇಶ್ ತನಿಖೆಗೆ ನೀಡಿದ ತಡೆಯಾಜ್ಞೆ ವಿಸ್ತರಿಸಿದೆ.ಬಳಿಕ ಎರಡು ಕಡೆ ವಾದ ಆಲಿಸಿದ ನ್ಯಾಯಾಧೀಶರು ಆದೇಶವನ್ನು ಕಾಯ್ದಿರಿಸಿದ್ದಾರೆ .
ಜಾರಿ ನಿರ್ದೇಶನಾಲಯ ನೀಡಿದ ಸಮನ್ಸ್ ಅನ್ನು ಪ್ರಶ್ನಿಸಿ ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿ ಅವರು ಹೈಕೋರ್ಟ್ ಅರ್ಜಿ ಸಲ್ಲಿಸಿದ್ದಾರೆ. ಅವರ ಪರವಾಗಿ ಹಿರಿಯ ವಕೀಲ ಸಂದೇಶ ಚೌಟ ಅವರು ವಾದ ಮಂಡಿಸಿದರು. ಅಪರಾಧದ ಸಂಪತ್ತು ಮುಚ್ಚಿಟ್ಟಿದ್ದರೆ ಆಗ ಆಗ ಇಡಿ ವ್ಯಾಪ್ತಿಗೆ ಬರುತ್ತೆ. ಸಂಪತ್ತಿನ ಸ್ವಾಧೀನದಲ್ಲಿದ್ದರೆ, ಅನುಭವಿಸುತ್ತಿದ್ದರೆ ಇಡೀ ವ್ಯಾಪ್ತಿಗೆ ಬರುತ್ತದೆ. ಈ ಕೇಸ್ ನಲ್ಲಿ ಇಡಿ ECIR ದಾಖಲಿಸಿದ್ದು ಸರಿಯಾದುದ್ದಲ್ಲ. FIR ದಾಖಲಿಸಿದ 4 ದಿನದಲ್ಲೇ ECIR ದಾಖಲಿಸಿದೆ. ಲೋಕಾಯುಕ್ತ ಪೊಲೀಸರ ತನಿಖೆಯನ್ನು ಇಡಿ ಪುನರಾವರ್ತಿಸುತ್ತಿದೆ. ಇಡಿ ಸಲ್ಲಿಸಿರುವ ಆಕ್ಷೇಪಣೆಯಲ್ಲಿ 14 ಸೈಟ್ ಸಂಪತ್ತೆಂದಿದೆ ಮುಡಾದ ಬೇರೆ ಸೈಟ್ಗಳನ್ನು ಇಡಿ ಜಪ್ತಿ ಮಾಡಿದೆ ಎಂದು ಸಂದೇಶ್ ಚೌಟ ವಾದ ಮಂಡಿಸಿದರು.
ಇಡಿ ತಾತ್ಕಾಲಿಕ ಜಾತಿ ಆದೇಶದಲ್ಲಿ ಹಲವು ಅಂಶಗಳನ್ನು ಪ್ರಸ್ತಾಪಿಸಿದೆ. ಭೂಸ್ವಾಧೀನ, ಭೂ ಪರಿವರ್ತನೆ ಇತ್ಯಾದಿಗಳ ಬಗ್ಗೆಯೂ ತನಿಖೆ ನಡೆಸಿದೆ. ಲೋಕಾಯುಕ್ತ ಪೊಲೀಸರ ತನಿಖಾ ವ್ಯಾಪ್ತಿಯಲ್ಲಿ ಇಡಿ ಪ್ರವೇಶಿಸಿದೆ. ಒಳಗೆ ಹಿಂದಿರುಗಿಸಿರುವ 14 ಸೈಟ್ಗಳನ್ನು ಇಡಿ ಜಪ್ತಿ ಮಾಡಿಲ್ಲ. ಆದರೆ ಇತರೆ 160 ಸೀಟ್ಗಳನ್ನು ಇಡಿ ಜಪ್ತಿ ಮಾಡಿದೆ. ಈಗಾಗಲೇ ಲೋಕಾಯುಕ್ತ ಪೊಲೀಸರು ಬಿ ಕೋರ್ಟ್ ಗೆ ಬಿ ರಿಪೋರ್ಟ್ ಸಲ್ಲಿಸಿದ್ದಾರೆ. ತನಿಖೆಯಲ್ಲಿ ಯಾವುದೇ ಅಕ್ರಮ ಕಂಡು ಬಂದಿಲ್ಲವೆಂದು ವರದಿ ಸಲ್ಲಿಸಿದ್ದಾರೆ ಎಂದು ಸಿಎಂ ಪತ್ನಿ ಬಿಎಂ ಪಾರ್ವತಿ ಪರ ಸಂದೇಶ ಚೌಟ ವಾದ ಅಂತ್ಯಗೊಳಿಸಿದರು.
ಬಳಿಕ ಇಡಿ ಪರ ಹೆಚ್ಚುವರಿ ಸಾಲಿಸಿಟರ್ ಜನರಲ್ ಅರವಿಂದ್ ಕಾಮತ್ ಅವರು ವಾದ ಮಂಡಿಸಿದರು. ಭ್ರಷ್ಟಾಚಾರ ಹಾಗೂ ಅಪರಾಧದ ಹಣ ಸಯಾಮಿ ಅವಳಿಗಳಂತೆ. ಭ್ರಷ್ಟಾಚಾರ ಆಗುತ್ತಿದ್ದಂತೆ ಅಪರಾಧದ ಹಣ ಸಂಪಾದನೆ ಆಗುತ್ತದೆ. ಖಾಸಗಿ ದೂರಿನಲ್ಲಿ 5000 ಕೋಟಿ ಮುಡಾ ಹಗರಣವನ್ನು ಪ್ರಸ್ತಾಪಿಸಲಾಗಿದೆ. ಈ ಖಾಸಗಿ ದೂರು ಆಧರಿಸಿ ಲೋಕಾಯುಕ್ತರು FIR ದಾಖಲಿಸಿದ್ದಾರೆ. ಹೀಗಾಗಿ ಇದು ಕೇವಲ 14 ಸೈಟ್ ಗಳಿಗೆ ಸಂಬಂಧಿಸಿದ ದೂರು ಮಾತ್ರವಲ್ಲ. ಮುಡಾದ ಅಕ್ರಮಗಳ ದೂರಿನ ಬಗ್ಗೆ ಇಡಿ ತನಿಖೆ ನಡೆಸಿದೆ ಎಂದು ಅವರು ವಾದಿಸಿದರು.
ಇಡಿ ಪ್ರಶ್ನಾವಳಿ ಸಂಬಂಧಿಕರ ವಿವರ ಕೇಳಿದ್ದಕ್ಕೆ ಆಕ್ಷೇಪಿಸಿದ್ದಾರೆ. ಮುಡಾದ ಅಪರಾಧದ ಸಂಪತ್ತನ್ನು ಸಂಬಂಧಿಕರಿಗೆ ಹಸ್ತಾಂತರಿಸಲಾಗಿದೆ. ಪ್ರಭಾವಿ ವ್ಯಕ್ತಿಗಳು ನೆಂಟರ ಹೆಸರಲ್ಲಿ ಸೈಟ್ ಗಳ ಹಂಚಿಕೆ ಪಡೆಯುತ್ತಿದ್ದಾರೆ. ಒತ್ತಡ ಹೆರಿ ಸೈಟ್ ಹಂಚಿಕೆ ಪಡೆದಿದ್ದಾರೆ ಎಂದು ಸಾಕ್ಷಿ ಒಬ್ಬರ ಹೇಳಿಕೆ ಸಹ ಇದೆ. ಮುಡಾ ಮಾಜಿ ಆಯುಕ್ತರ ಸಂಬಂಧಿಕರಿಗೆ ಹಲವು ಸೈಟ್ಗಳನ್ನು ಹಂಚಲಾಗಿದೆ. ತಾತ, ಪತ್ನಿಯ ತಾತ, ಸಹೋದರನ ಮಗ ಹೀಗೆ ಹಲವು ಹೆಸರಿನಲ್ಲಿ ಅಕ್ರಮವಾಗಿ ಸೈಟ್ ಮಂಜೂರು ಮಾಡಲಾಗಿದೆ.
ಅರವಿಂದ್ ಕಾಮತ್ ಅವರು ಈ ಮಾಹಿತಿ ನೀಡುತ್ತಿದ್ದಂತೆ, ಇಷ್ಟೊಂದು ಸೈಟ್ ಗಳಾ? ಎಂದು ನ್ಯಾ.ಎಂ.ನಾಗಪ್ರಸನ್ ಅವರು ಅಚ್ಚರಿ ವ್ಯಕ್ತಪಡಿಸಿದರು. ಈ ಮಾಹಿತಿಯನ್ನು ತನಿಖಾ ಸಂಸ್ಥೆಗಳಿಗೆ ಹಂಚಿಕೆ ಮಾಡಲಾಗುವುದು. ಹೀಗಾಗಿಯೇ ಸಂಬಂಧಿಗಳ ವಿವರವನ್ನು ಆರೋಪಿಗಳಿಂದ ಕೇಳುತ್ತಿದ್ದೇವೆ. 2024 ಅಕ್ಟೋಬರ್ 1 ರಂದು ಪಾರ್ವತಿ 14 ಸೀಟುಗಳನ್ನು ಮುಡಾಗೆ ಹಿಂದಿರುಗಿಸಿದ್ದಾರೆ. ಜೆಟ್ ಸ್ಪೀಡ್ ನಲ್ಲಿ ಪಾರ್ವತಿಯವರು ಮುಡಾಗೆ ಹಿಂತಿರುಗಿಸಿದ್ದಾರೆ. ಸಾಮಾನ್ಯ ಜನ ಹೋದರೆ ತಿಂಗಳಾದರೂ ಕೂಡ ಕೆಲಸ ಆಗುವುದಿಲ್ಲ ಸಿಎಂ ಪತ್ನಿ ಮನವಿ ಕೊಟ್ಟರೆ ಆ ಕ್ಷಣವೇ ಕೆಲಸವಾಗುತ್ತದೆ ಎಂದು ಅರವಿಂದ್ ಕಾಮತ್ ವಾದಿಸಿದರು.