ಕೊಪ್ಪಳ : ಅಪರಿಚಿತ ವಾಹನ ಒಂದು ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ನಲ್ಲಿ ಚಲಿಸುತ್ತಿದ್ದ ತಾಯಿ ಹಾಗೂ ಮಗ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಕಡೆಕೊಪ್ಪ ಗ್ರಾಮದಲ್ಲಿ ನಡೆದಿದೆ.
ಹೌದು ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಕಡೆಕೊಪ್ಪ ಗ್ರಾಮದಲ್ಲಿ ಅಪರಿಚಿತ ವಾಹನ ಡಿಕ್ಕಿಯಾಗಿ ಬೈಕಿನಲ್ಲಿದ್ದ ತಾಯಿ ಮತ್ತು ಮಗ ಸಾವನಪ್ಪಿದ್ದಾರೆ. ಬೈಕ್ ಚಲಾಯಿಸುತ್ತಿದ್ದ ರುಕ್ಮಿಣಿ (36) ಹಾಗೂ ವಿಜಯ (13) ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
ಮೃತರು ಕುಷ್ಟಗಿ ತಾಲೂಕಿನ ಕಡೆಕೊಪ್ಪ ಗ್ರಾಮದ ನಿವಾಸಿಗಳು ಎಂದ ತಿಳಿದುಬಂದಿದೆ.
ಮೃತ ರುಕ್ಮಿಣಿ ಕಡೆಕೊಪ್ಪ ಗ್ರಾಮದ ಬಳಿ ಡಾಬಾ ನಡಿಸುತ್ತಿದ್ದರು. ಎನ್ನಲಾಗಿದೆ. ಮಗಳಿಗೆ ಬುತ್ತಿ ಕೊಡಲು ಇಳಕಲ್ಗೆ ತೆರಳುತ್ತಿದ್ದರು. ಬಾಗಲಕೋಟೆ ಜಿಲ್ಲೆಯಲ್ಲಿ ರುಕ್ಮಿಣಿಯವರ ಪುತ್ರಿ ಓದುತ್ತಿದ್ದಳು. ಬೈಕ್ ಮೇಲೆ ತೆರಳುತ್ತಿದ್ದಾಗ ಈ ಒಂದು ಘಟನೆ ಸಂಭವಿಸಿದೆ. ಘಟನಾ ಸ್ಥಳಕ್ಕೆ ಕುಷ್ಟಗಿ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.