ಯಾದಗಿರಿ : ಕುಡಿಯುವ ನೀರಿನ ವಿಚಾರವಾಗಿ ಸಹೋದರ ಸಂಬಂಧಿಸಿದ ನಡುವೆ ಗಲಾಟೆ ನಡೆದಿದ್ದು, ಗಲಾಟೆ ವಿಕೋಪಕ್ಕೆ ತಿರುಗಿ ಒಬ್ಬ ಯುವಕನ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಯಾದಗಿರಿ ಜಿಲ್ಲೆಯ ಹುಣಸಗಿ ಎಂಬಲ್ಲಿ ನಡೆದಿದೆ.ಕೊಲೆಯಾಗಿರುವ ಯುವಕನನ್ನು ನಂದಕುಮಾರ್ ಕಟ್ಟಿಮನಿ (21) ಎಂದು ಹೇಳಲಾಗುತ್ತಿದ್ದು, ನಂದಕುಮಾರ ಚಿಕ್ಕಪ್ಪನ ಮಗ ಹನುಮಂತ ಹಾಗೂ ಆತನ ತಾಯಿ ಕೊಲೆ ಮಾಡಿರುವ ಆರೋಪಿಗಳು ಎಂದು ಹೇಳಲಾಗುತ್ತಿದೆ.
ಬೆಳಗಾವಿ ಜಿಲ್ಲೆಯ ಜನರನ್ನು ಬಕ್ರಾ ಮಾಡೋಕೆ ಜಗದೀಶ್ ಶೆಟ್ಟರ್ ಬಂದಿದ್ದಾರಾ?- ಲಕ್ಷ್ಮೀ ಹೆಬ್ಬಾಳಕರ್ ಪ್ರಶ್ನೆ
ಇಬ್ಬರ ಮನೆಯ ಬಳಿ ಸರ್ಕಾರದ ಕುಡಿಯುವ ನೀರಿನ ನಲ್ಲಿ ಇದೆ. ಈ ನೀರನ್ನು ಎರಡೂ ಕುಟುಂಬದವರೂ ಬಳಸಿಕೊಳ್ಳುತ್ತಿದ್ದರು. ಎಂದಿನಂತೆ ಇಂದು ಸಹ ಹತ್ಯೆಯಾದ ನಂದಕುಮಾರ್‌ನ ಅಜ್ಜಿ ನೀರಿಗೆ ಹೋಗಿದ್ದಾಗ ಎರಡೂ ಕುಟುಂಬದ ನಡುವೆ ಜಗಳವಾಗಿದೆ. ಇದೇ ವಿಚಾರಕ್ಕೆ ಕೊಲೆ ನಡೆದಿದೆ ಎಂದು ತಿಳಿದು ಬಂದಿದೆ.
ಕಾಂಗ್ರೆಸ್ ತೊರೆದ ಭಾರತದ ಅತ್ಯಂತ ಶ್ರೀಮಂತ ಮಹಿಳೆ ಸಾವಿತ್ರಿ ಜಿಂದಾಲ್, ಬಿಜೆಪಿಗೆ ಸೇರ್ಪಡೆ
ಹತ್ಯೆಯಾದ ನಂದಕುಮಾರ್, ಪದವಿ ಪರೀಕ್ಷೆ ಮುಗಿಸಿ ಬಂದ ಬಳಿಕ ಆತನ ಅಜ್ಜಿ ಜಗಳದ ವಿಚಾರ ತಿಳಿಸಿದ್ದು, ಇದನ್ನು ಪ್ರಶ್ನಿಸಲು ಹೋಗಿದ್ದಾಗ ಬಟನ್ ಚಾಕುವಿನಿಂದ ಆರೋಪಿಗಳು ಇರಿದಿದ್ದಾರೆ ಎಂದು ತಿಳಿದು ಬಂದಿದೆ. ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದ ನಂದಕುಮಾರ್‍ನನ್ನು ಆಸ್ಪತ್ರೆಗೆ ಸಾಗಿಸುವಷ್ಟರಲ್ಲೇ ಸಾವಿಗೀಡಾಗಿದ್ದಾನೆ.ಸ್ಥಳಕ್ಕೆ ಎಸ್‍ಪಿ ಜಿ.ಸಂಗೀತಾ, ಡಿವೈಎಸ್‍ಪಿ ಜಾವೇದ್ ಇನಾಮ್ದಾರ್, ಹುಣಸಗಿ ಸಿಪಿಐ ಸಚಿನ್ ಛಲವಾದಿ, ಪಿಎಸ್‍ಐ ಸಂಗೀತಾ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆರೋಪಿಗಳನ್ನು ಬಂಧಿಸಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ.