ಯಾದಗಿರಿ : ಮಧ್ಯಪಾನ ಬಿಡು ಅಂದಿದ್ದಕ್ಕೆ ಮಗಳನ್ನೇ ತಾಯಿಯೊಬ್ಬಳು ಕೊಲೆ ಮಾಡಿರುವ ಘಟನೆ ವರದಿಯಾಗಿದೆ, ಕತ್ತು ಹಿಸುಕಿ 10 ವರ್ಷದ ಮಗಳನ್ನು ತಾಯಿ ಕೊಲೆ ಮಾಡಿರುವ ಘಟನೆ ಯಾದಗಿರಿಯ ರಾಜೀವ್ ಗಾಂಧಿ ಬಡಾವಣೆಯಲ್ಲಿ ಈ ಕೃತ್ಯ ನಡೆದಿದೆ.
ಮಗಳನ್ನ ಕೊಂದ ಬಳಿಕ ಆಕೆ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ತಾಯಿ ನಿರ್ಮಲ ಡ್ರಾಮಾ ಮಾಡಿದ್ದಾಳೆ. 15 ರೂಪಾಯಿ ಕೊಟ್ಟಿಲ್ಲವೆಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ತಾಯಿ ನಿರ್ಮಲ ಕೊಲೆಯ ಬಳಿಕ ನಾಟಕವಾಡಿದ್ದಾಳೆ. ತಂದೆ ತಾಯಿ ಇಬ್ಬರು ಕುಡಿತದ ಚಟಕ್ಕೆ ದಾಸರಾಗಿದ್ದರು. ಆರೋಪಿ ನಿರ್ಮಲಾಗೆ ನಾಲ್ಕು ಜನ ಮಕ್ಕಳು ಇದ್ದಾರೆ.
ಈ ರೀತಿ ಕುಡಿಯುತ್ತಿದ್ದರೆ ಕುಟುಂಬದ ನಿರ್ವಹಣೆ ಕಷ್ಟ ಆಗುತ್ತದೆ ಎಂದು ಮಕ್ಕಳು ತಾಯಿಗೆ ಬುದ್ದಿ ಹೇಳಿದ್ದಾರೆ. ಅದೇ ರೀತಿ ನಿನ್ನೆ ಕುಡಿದು ಮನೆಗೆ ಬಂದಿದ್ದಾಳೆ. ಈ ವೇಳೆ ಕೊಲೆಯಾದ ಪ್ರತಿಭಾ ಎನ್ನುವ ಮಗಳ ಜೊತೆ ನಿರ್ಮಲಾ ಜಗಳ ಮಾಡುತ್ತಾಳೆ. ಆಗ ಗಲಾಟೆ ವಿಕೋಪಕ್ಕೆ ತಿರುಗಿ ಕತ್ತು ಹಿಸುಕಿ ಪ್ರತಿಭಾಳನ್ನು ತಾಯಿ ನಿರ್ಮಲ ಕೊಲೆ ಮಾಡಿದ್ದಾಳೆ ಎಂದು ತಿಳಿದುಬಂದಿದೆ.








