ಉತ್ತರಕನ್ನಡ : ಮಧ್ಯಾಹ್ನದ ಊಟ ಸೇವಿಸಿದ 70ಕ್ಕೂ ಹೆಚ್ಚು ಶಾಲಾ ಮಕ್ಕಳು ಅಸ್ವಸ್ಥರಾಗಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡು ತಾಲೂಕಿನ ಪಂಚವಟಿಯಲ್ಲಿ ಇರುವ ಪಿಎಂಶ್ರೀ ಜವಹಾರ ನವೋದಯ ವಿದ್ಯಾಲಯದಲ್ಲಿ ನಡೆದಿದೆ.
ಫೆಬ್ರುವರಿ 4ರಂದು 518 ಮಕ್ಕಳು ಮಧ್ಯಾಹ್ನದ ಬಿಸಿ ಊಟ ಸೇವಿಸಿದರು. ಈ ಪೈಕಿ 70 ಮಕ್ಕಳಿಗೆ ಜ್ವರ, ವಾಂತಿ, ಭೇದಿ ಹಾಗೂ ಹೊಟ್ಟೆ ನೋವು ಕಾಣಿಸಿಕೊಂಡಿತು. ತಕ್ಷಣ ಮಕ್ಕಳನ್ನು ಮುಂಡಗೋಡು ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಯಿತು.
ಸ್ಥಳಕ್ಕೆ ಆಗಮಿಸಿ ಆರೋಗ್ಯ ಅಧಿಕಾರಿಗಳ ತಂಡ ಪರಿಶೀಲನೆ ನಡೆಸುತ್ತಿದೆ. ಅಧಿಕಾರಿಗಳು ಬೆಳಗಾವಿ ಇಲಾಖೆ ಕಳುಹಿಸಿದ್ದಾರೆ. ಇನ್ನು 8 ಶಾಲಾ ಮಕ್ಕಳಲ್ಲಿ ಜ್ವರ ಹಾಗೂ ವಾಂತಿಯ ಲಕ್ಷಣ ಕಂಡು ಬಂದಿದೆ. ಎಲ್ಲ ಮಕ್ಕಳಿಗೆ ಪರೀಕ್ಷೆ ನಡೆಸಿರುವ ಆರೋಗ್ಯ ಅಧಿಕಾರಿಗಳ ತಂಡ ಘಟನೆಗೆ ಕಾರಣ ಏನು ಎನ್ನುವುದರ ಕುರಿತು ತನಿಖೆ ನಡೆಸಲಾಗುತ್ತಿದೆ.








