ರಾಯಚೂರು : ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಹಟ್ಟಿ ಚಿನ್ನದ ಗಣಿ ಮುಖ್ಯದ್ವಾರದ ಬಳಿ ಸುಮಾರು 15ಕ್ಕೂ ಹೆಚ್ಚು ಸ್ಪೋಟಕ ವಸ್ತುಗಳು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಸ್ಥಳೀಯರಲ್ಲಿ ಮತ್ತು ಕಾರ್ಮಿಕರಲ್ಲಿ ಇದೀಗ ಆತಂಕ ಮನೆ ಮಾಡಿದೆ.
ಸ್ಫೋಟಕ್ಕೆ ಬಳಸುವ 15 ಕ್ಕೂ ಹೆಚ್ಚು ಮದ್ದುಗಳ ಕಾಟ್ರಿಜ್‌ಗಳು ಚಿನ್ನದ ಗಣಿ ಕಂಪನಿ ಗೇಟ್ ಬಳಿ ಮುಖ್ಯರಸ್ತೆಯಲ್ಲಿ ಪತ್ತೆಯಾಗಿವೆ. ಸ್ಫೋಟಕ ವಸ್ತುಗಳು ಯಾರಿಗೆ ಸೇರಿದ್ದು ಅನ್ನೊದು ಇನ್ನೂ ತಿಳಿದು ಬಂದಿಲ್ಲ. ಹಟ್ಟಿ ಚಿನ್ನದಗಣಿ ಭದ್ರತಾ ಸಿಬ್ಬಂದಿ, ಅಧಿಕಾರಿಗಳು ಹಾಗೂ ಪೊಲೀಸರು ಈಗ ಅಲರ್ಟ್ ಆಗಿದ್ದಾರೆ. ಸ್ಥಳಕ್ಕೆ ಹಟ್ಟಿ ಠಾಣೆ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ.
ಭದ್ರತಾ ದೃಷ್ಟಿಯಿಂದ ಜಿಲ್ಲೆಯ ಸೂಕ್ಷ್ಮ ಪ್ರದೇಶವಾದ ಹಟ್ಟಿ ಚಿನ್ನದಗಣಿ ದ್ವಾರದ ಬಳಿ ಮದ್ದುಗಳು ಪತ್ತೆಯಾಗಿದ್ದರಿಂದ ಪೊಲೀಸರು ಪರಿಶೀಲನೆ ಚುರುಕುಗೊಳಿಸಿದ್ದಾರೆ. ಹಟ್ಟಿ ಚಿನ್ನದಗಣಿಯಲ್ಲಿ ಚಿನ್ನದ ಗಣಿಗಾರಿಕೆಗೆ ಬಳಸುವ ಮದ್ದುಗಳಾ ,ಖಾಸಗಿ ಕಲ್ಲು ಕ್ವಾರೆಗಳಲ್ಲಿ ಕಲ್ಲು ಗಣಿಗಾರಿಕೆಗೆ ಬಳಸುವ ಮದ್ದುಗಳಾ. ಯಾರು ಎಲ್ಲಿಗೆ ಸಾಗಿಸುತ್ತಿದ್ದರು ಅನ್ನೋ ಬಗ್ಗೆ ತನಿಖೆ ಆರಂಭಗೊಂಡಿದೆ.








