ಬೆಂಗಳೂರು : ಕಂಪನಿಯಲ್ಲಿ ಕೆಲಸ ಕೊಡಿಸುವ ಆಮಿಷ ತೋರಿಸಿ, ಅನೇಕರಿಂದ ಸುಮಾರು 14 ಲಕ್ಷಕ್ಕೂ ಅಧಿಕ ಹಣ ಪಡೆದು ವಂಚನೆ ಎಸಗಿದ್ದ ಖಾಸಗಿ ಕಂಪನಿಯ HR ನನ್ನು ಇದೀಗ ಬೆಂಗಳೂರು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಎಚ್ ಆರ್ ಪತ್ನೂಲ್ ಕಲಂದರ್ ಖಾನ್ ನನ್ನು ಇದೀಗ ಬೆಂಗಳೂರು ಸಿಸಿಬಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
8 ಅಭ್ಯರ್ಥಿಗಳಿಗೆ 14 ಲಕ್ಷದ 23 ಸಾವಿರ ರೂ.ವಂಚಿಸಿದ್ದ. ಬಿಟಿಎಂ ಲೇಔಟ್ ಕಂಪನಿ ಒಂದರಲ್ಲಿ ಕಲಂದರ್ ಖಾನ್ ಎಚ್ಆರ್ ಆಗಿದ್ದ. ಕೆಲಸ ಅರಸಿ ಬರುವ ಅಭ್ಯರ್ಥಿಗಳೇ ಖಾನ್ ಟಾರ್ಗೆಟ್ ಆಗಿದ್ದರು. ಪ್ರತಿಷ್ಠಿತ ಕಂಪನಿಯಲ್ಲಿ ಕೆಲಸದ ಆಮಿಷ ತೋರಿಸಿ ವಂಚನೆ ಎಸಗುತ್ತಿದ್ದ. 2 ಲಕ್ಷಕ್ಕೂ ಅಧಿಕ ಹಣಕ್ಕೆ ಬೇಡಿಕೆ ಇಡುತ್ತಿದ್ದ. ಹಂತ ಹಂತವಾಗಿ ಹಣ ಹಾಕಿಸಿಕೊಂಡು ಎಚ್ ಆರ್ ವಂಚಿಸುತ್ತಿದ್ದ.
ಈ ವೇಳೆ ಮೋಸ ಹೋದ ಗೀತಾ ಎಂಬ ಯುವತಿ ಈ ಕುರಿತು ಪೊಲೀಸರಿಗೆ ದೂರು ನೀಡಿದ್ದಾರೆ. ಯುವತಿಯ ದೂರನ್ನು ಆಧರಿಸಿ ಇದೀಗ ಸಿಸಿಬಿ ಪೊಲೀಸರು ಆರೋಪಿಯನ್ನು ಅರೆಸ್ಟ್ ಮಾಡಿದ್ದಾರೆ. ಇನ್ನು ಕಲಂದರ್ ಗೆ ಸಹಕರಿಸಿದ ಮತ್ತಿಬ್ಬರಿಗಾಗಿ ಸಿಸಿಬಿ ಪೊಲೀಸರು ಶೋಧಕಾರ್ಯ ಮುಂದುವರಿಸಿದ್ದಾರೆ.