ಬೆಳಗಾವಿ : ಬೆಳಗಾವಿಯಲ್ಲಿ ಸುಮಾರು 15 ಜನರ ಪುಂಡರ ಗುಂಪೊಂದು ನೈತಿಕ ಪೊಲೀಸ್ ಗಿರಿ ನಡೆಸಿದ್ದು ಯುವಕನೋರ್ವನನ್ನು ಕೋಣೆಯಲ್ಲಿ ಕೂಡಿಹಾಕಿ ಮಾರಣಾಂತಿಕ ಹಲ್ಲೆ ನಡೆಸಿರುವ ಅಂತಹ ಘಟನೆ ಜರುಗಿದೆ.
ಗೌಡಗಾಂವ ಗ್ರಾಮದ ಸಚಿನ್ (22) ಮುಸ್ಕಾನ್ (23) ಮೇಲೆ ಹಲ್ಲೆ ಮಾಡಲಾಗಿದ್ದು, ಇಬ್ಬರು ಸರ್ವರ್ ಸಮಸ್ಯೆ ಹಿನ್ನೆಲೆ ಕಿಲ್ಲ ಕೆರೆ ಬಳಿ ಜೋಡಿ ಕೂತಿದ್ದರು ಎನ್ನಲಾಗುತ್ತಿದೆ. ಈ ವೇಳೆ ಅಲ್ಲಿಗೆ ವಂದ ಸುಮಾರು 15ಕ್ಕೂ ಹೆಚ್ಚು ಪುಂಡರಿಂದ ಯುವಕ ಹಾಗೂ ಯುವತಿಯ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.
ಹಲ್ಲೆಗೆ ಒಳಗಾದವರನ್ನು ಸಚಿನ್ ಲಂಬಾಣಿ ಹಾಗೂ ಮುಸ್ಕಾನ್ ಪಟೇಲ್ ಎಂದು ಗುರುತಿಸಲಾಗಿದ್ದು, ಇಬ್ಬರ ಮೇಲೆ ಮೇಲೆ ಪುಂಡರು ಹಲ್ಲೆಗೈದಿದ್ದಾರೆ. ಕೆರೆ ಬಳಿ ನಿಂತಿದ್ದ ಜೋಡಿಯನ್ನು ಬಲವಂತವಾಗಿ ಕರೆದೋಯ್ದು ಹಲ್ಲೆ ನಡೆಸಿದ್ದಾರೆ.ಕಿಲ್ಲಕೆರೆ ಬಳಿ ಇರುವ ಕೋಣೆಯಲ್ಲಿ ಕೂಡಿಹಾಕಿ ಇಬ್ಬರ ಮೇಲೆ ಹಲ್ಲೆ ನಡೆಸಿದ್ದಾರೆ 3 ಗಂಟೆಗಳ ಕಾಲ ನಿರಂತರವಾಗಿ ಗುಂಪು ಮಾರಣಾಂತಿಕ ಹಲ್ಲೆ ನಡೆಸಿದೆ.
ಬಳಿಕ ಯುವತಿಯ ಪೋಷಕರಿಂದ 112ಗೆ ಕರೆ ಮಾಡಿ ದೂರು ನೀಡಲಾಗಿದ್ದು ಲೊಕೇಶನ್ ಟ್ರೈ ಮಾಡಿ ಪೊಲೀಸರು ಇಬ್ಬರನ್ನು ರಕ್ಷಿಸಿದ್ದಾರೆ. ನಂತರ ಬೆಳಗಾವಿಯ ಬಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಬೆಳಗಾವಿಯ ಮಾರ್ಕೆಟ್ ಪೊಲೀಸ್ ಠಾಣ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.