ನವದೆಹಲಿ : ಇರಾನ್ ಇಸ್ರೇಲ್ ಯುದ್ಧದ ನಡುವೆ ಇದೀಗ ಮೊದಲ ಬಾರಿಗೆ ಇರಾನ್ ಪರಮೋಚ್ಚ ನಾಯಕ ಮೊಜ್ತಾಬಾ ಖಮನೈ ಮೊದಲ ಬಾರಿಗೆ ಪ್ರತ್ಯಕ್ಷನಾಗಿದ್ದು, ಯುದ್ಧ ಆರಂಭವಾದ ಬಳಿಕ ಮೊದಲ ಬಾರಿಗೆ ಎಂಟ್ರಿ ಆಗಿರುವ ವಿಡಿಯೋ ವೈರಲ್ ಆಗಿದೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಇಸ್ರೇಲ್ ಹೇಳುವ ಪ್ರಕಾರ ಮೊಜ್ತಾಬಾ ಖಮನೈ ನನ್ನ ಕೊಲೆ ಮಾಡಿದ್ದೇವೆ ಅಥವಾ ತೀವ್ರವಾಗಿ ಗಾಯಗೊಂಡು ಚಿಕಿತ್ಸೆ ಪಡೆಯುವ ಹಂತದಲ್ಲಿದ್ದಾನೆ ಎಂದು ಹೇಳಿಕೆ ನೀಡಿದ್ದವು. ಆದರೆ IRGC ಮೊಜ್ತಾಬಾ ಖಮನೈ ಅವರ ನಿರ್ದೇಶನದ ಮೇರೆಗೆ ನಾವು ದಾಳಿ ಮಾಡುತ್ತಿದ್ದೇವೆ ಎನ್ನುವಂತಹ ಹೇಳಿಕೆಗಳನ್ನು ಕೊಡುತ್ತಿದ್ದರು ಅದರ ಜೊತೆಗೆ ಇದರ ಮಧ್ಯದಲ್ಲಿ ಅನೇಕ ಆಡಿಯೋಗಳು ಕೂಡ ಬಿಟ್ಟಿದ್ದರು.
ಖಮನೈ ಹೇಳಿಕೆ ಕೊಟ್ಟಿದ್ದಾರೆ ಎನ್ನುವ ಆಡಿಯೋ ಆಗಿದ್ದವು. ಆದರೆ ಇದೀಗ ವೈರಲ್ ಆಗಿರುವ ವಿಡಿಯೋ ನೋಡಿದರೆ ಸೈನಿಕರಿಗೆ ಉರಿದುಂಬಿಸುವಂತಹ ಕೆಲಸ ಮಾಡುತ್ತಿದ್ದು ವಾರ್ ರೂಂಗೆ ಗ್ರಾಂಡ್ ಎಂಟ್ರಿ ಕೊಟ್ಟಿದ್ದರೆ. ವಾರ್ ರೂಂಗೆ ನಡೆದುಕೊಂಡು ಬರುತ್ತಿರುವ ಮೊಟ್ಟಮೊದಲ ವಿಡಿಯೋ ವೈರಲಾಗಿದೆ. ಈ ಮೂಲಕ ಮೋಜ್ತಬಾ ಖಮನೈ ಬದುಕಿದ್ದಾರೆ ಎಂದು ಹೇಳಲಾಗುತ್ತಿದೆ.
🚨🇮🇷 the first appearance of Commander-in-Chief Ayatollah Seyyed Mejbi Khamenei in the war room… pic.twitter.com/7Zg66EVlnz
— Iran TV (@Iran_TVv) April 5, 2026








