ನವದೆಹಲಿ : ದೇಶದ ಜನತೆಗೆ ಪ್ರಧಾನಿ ಮೋದಿ ಸರ್ಕಾರ ಈ ಬಾರಿ ದಸರಾ ಹಬ್ಬದ ಭರ್ಜರಿ ಗಿಫ್ಟ್ ನೀಡಿದ್ದು, ಆರೋಗ್ಯ, ವಿಮೆ ಮರುವಿಮೆಯ ಮೇಲಿನ ಜಿಎಸ್ಟಿ ಸಂಪೂರ್ಣ ರದ್ದು ಮಾಡಿದೆ. ಕ್ಯಾನ್ಸರ್ ಅಪರೂಪದ ಕಾಯಿಲೆ ಮತ್ತು ಇತರ ತೀವ್ರ ದೀರ್ಘಕಾಲದ ಔಷದ ಮೇಲಿನ ಜಿ ಎಸ್ ಟಿ ಯನ್ನು ರದ್ದು ಮಾಡಿದೆ.
ಅಷ್ಟೇ ಅಲ್ಲದೆ ಮೂರು ಜೀವ ಉಳಿಸುವ ಔಷದ ಮೇಲಿನ ಜಿಎಸ್‌ಟಿ ಶೇಕಡ 5ರಿಂದ ಶೂನ್ಯಕ್ಕೆ ಇಳಿಕೆ ಮಾಡಿದೆ ಇತರೆ ಎಲ್ಲಾ ಔಷಧಗಳ ಮೇಲೆ ಬಿಎಸ್‌ಟಿ ಶೇಕಡಾ 12 ರಿಂದ ಶೇಕಡ ಶೂನ್ಯಕ್ಕೆ ಇಳಿಕೆ ಮಾಡಿದ್ದು, ನವೀಕರಿಸಬಹುದಾದ ಇಂಧನ ಸಾಧನೆಗಳು ಮತ್ತು ಅವುಗಳ ಉತ್ಪಾದನೆಗೆ ಬಳಸುವ ಭಾಗಗಳ ಮೇಲಿನ ಜಿ ಎಸ್ ಟಿ ತರ ಶೇಕಡ 12 ರಿಂದ 5ಕ್ಕೆ ಇಳಿಕೆ ಮಾಡಿದೆ.
ಪ್ರತಿದಿನ 7500ರೂ. ಅಥವಾ ಅದಕ್ಕಿಂತ ಕಡಿಮೆ ಮೌಲ್ಯದ ಹೋಟೆಲ್, ವಸತಿ ಸೇವೆಗಳ ಮೇಲೆ ಶೇಕಡ 12 ರಿಂದ ಶೇಕಡ 5ಕ್ಕೆ ಇಳಿಕೆ ಮಾಡಿದೆ ಸಲೂನ್, ಯೋಗ ಕೇಂದ್ರಗಳು ಹಾಗೂ ಸಾಮಾನ್ಯ ನಾಗರಿಕರು ಬಳಸುವ ಸೌಂದರ್ಯ, ದೈಹಿಕ, ಯೋಗ ಕ್ಷೇಮ ಸೇವೆ ಮೇಲಿನ ಜಿಎಸ್‌ಟಿ ಶೇಕಡ 18 ರಿಂದ ಶೇಕಡ 5ಕ್ಕೆ ಇಳಿಕೆ ಮಾಡಲಾಗಿದೆ.ಶಾಲಾ ಮಕ್ಕಳ ಕಲಿಕಾ ಸಾಮಗ್ರಿಗಳ ಮೇಲೆ ಡಿಎಸ್‌ಟಿ ಸಂಪೂರ್ಣ ರದ್ದು ಮಾಡಿದೆ.ಮಕ್ಕಳ ಪೆನ್ನು, ಪೇಪರ್, ಮ್ಯಾಪ್, ಚಾರ್ಟ್, ಗ್ಲೋಬ್, ಪೆನ್ಸಿಲ್ ಸೇರಿದಂತೆ ಹಲವು ವಸ್ತುಗಳ ಮೇಲಿನ GST ಇಳಿಕೆ ಮಾಡಿದೆ.