ಬೆಂಗಳೂರು : ದೇಶಾದ್ಯಂತ ನಾಳೆ ಮಾಕ್ ಡ್ರಿಲ್ ನಡೆಸುವಂತೆ MHA ಸೂಚನೆ ಹಿನ್ನೆಲೆಯಲ್ಲಿ ಬೆಂಗಳೂರು ಮಹಾನಗರದಲ್ಲಿ ನಾಳೆ ಮಾಕ್ ಡ್ರಿಲ್ ಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ನಾಳೆ ಸಂಜೆ 4 ಗಂಟೆಗೆ ಸೈರನ್ ಮೊಳಗಿಸಲು ಪ್ಲಾನ್ ಮಾಡಲಾಗಿದೆ. ಸಂಜೆ 5:30 ರಿಂದ 7 ಗಂಟೆವರೆಗೆ ಮಾಕ್ ಡ್ರಿಲ್ ನಡೆಯಲಿದ್ದು, ಸಂಜೆ 6:40ರ ಸುಮಾರಿಗೆ ನಗರದಾದ್ಯಂತ ಲೈಟ್ ಆಫ್ ಮಾಡಲಾಗುತ್ತದೆ.
ಹಲಸೂರು, ಹಲಸೂರು ಅಗ್ನಿಶಾಮಕ ಠಾಣೆ ಸುತ್ತ ಮಾರ್ಕ ಡ್ರಿಲ್ ನಡೆಯಲಿದೆ ಆಪರೇಷನ್ ಅಭ್ಯಾಸ ಹೆಸರಿನಲ್ಲಿ ಮಾರ್ಕ್ ಡ್ರಿಗೆ ಈಗಾಗಲೇ ಸಿದ್ಧತೆ ಮಾಡಿಕೊಳ್ಳಲಾಗಿದೆ. ದೊಡ್ಡ ದೊಡ್ಡ ಕಟ್ಟಡದಿಂದ ರಕ್ಷಣೆ ಮಾಡುವ ಅಣುಕು ಪ್ರದರ್ಶನ ನಡೆಸಲಾಗುತ್ತದೆ. ಕ್ರ್ಯಾಶ್ ಬ್ಲಾಕ್ ಔಟ್ ಅಣುಕು ಪ್ರದರ್ಶನ ಹಿನ್ನೆಲೆ ನಾಳೆ ಸಂಜೆ ಇಡೀ ಬೆಂಗಳೂರಿನ ಆದ್ಯಂತ ಲೈಟ್ಸ್ ಆಫ್ ಆಗಲಿದೆ.ಆಪರೇಷನ್ ಅಭ್ಯಾಸ್ ಹೆಸರಿನಲ್ಲಿ ಅಣಕು ಪ್ರದರ್ಶನ ಮಾಡಲಾಗುತ್ತಿದ್ದು ಹಾಗಾಗಿ ನಾಳೆ ಸಂಜೆ 6:40ಕ್ಕೆ ಬೆಂಗಳೂರಿನದಂತೆ ಲೈಟ್ಸ್ ಆಫ್ ಆಗಲಿದೆ. ಯುದ್ಧದ ಮಾಕ್ ಡ್ರಿಲ್ ಅಂಗವಾಗಿ ಲೈಟ್ಸ್ ಆಫ್ ಮಾಡಲಾಗುತ್ತಿದೆ.