ಬಳ್ಳಾರಿ : ಗಣಿ ಹಗರಣದಲ್ಲಿ ಈ ಹಿಂದೆ ಶಾಸಕ ಜನಾರ್ದನ ರೆಡ್ಡಿ ಅವರು ವರ್ಷಗಳ ಕಾಲ ಜೈಲುವಾಸ ಅನುಭವಿಸಿದ್ದರು. ಇದೀಗ ಗಂಗಾವತಿ ಶಾಸಕ ಜನಾರ್ಧನ ರೆಡ್ಡಿ ಮತ್ತೆ ಗಣಿ ಲೂಟಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ನಿವೃತ್ತ ನ್ಯಾಯಮೂರ್ತಿ ಸುದಾಂಶ ದುಲಿಯಾ ಸಮಿತಿಯಿಂದ ವರದಿ ಸಲ್ಲಿಕೆ ಮಾಡಲಾಗಿದ್ದು, ಕರ್ನಾಟಕ ಗಡಿ ಒತ್ತುವರಿ ಸಂಬಂಧ ನಿವೃತ್ತ ನ್ಯಾಯಮೂರ್ತಿ ದುಲಿಯ ಸಮಿತಿ ವರದಿ ಸಲ್ಲಿಕೆಯಾಗಿದೆ.
ಒಂದು ತಿಂಗಳ ಹಿಂದೆ ಬಳ್ಳಾರಿಯಲಿ ಕಮಿಟಿ ಸರ್ವೇ ಮಾಡಲು ಬಂದಿತ್ತು. ಆಂಧ್ರದ ರಾಯದುರ್ಗ ತಾಲೂಕಿನ ಮಲಪನಗುಡಿಯಲ್ಲಿ ಈ ಒಂದು ಸರ್ವೆ ನಡೆದಿತ್ತು ಜನಾರ್ದನ ರೆಡ್ಡಿ ಒಡೆತನದ ಓ ಎಂ ಸಿ 2 ಹೆಸರಿನಲ್ಲಿ 39.50 ಹೆಕ್ಟರ್, ಅಂತರಗಂಗಮ್ಮ ಹೆಸರಿನ 68.50 ಪ್ರದೇಶದಲ್ಲಿ ಹೊಂದಾಣಿಕೆ ಆಗಿಲ್ಲ. ಗಣಿ ಗುತ್ತಿಗೆ ಮತ್ತು ಗಡಿಗಳ ಹೊಂದಾಣಿಕೆ ಆಗಿಲ್ಲವೆಂದು ವರದಿ ಸಲ್ಲಿಕೆ ಮಾಡಲಾಗಿದೆ. ಈ ಕಂಪನಿಗಳು ಕರ್ನಾಟಕದಲ್ಲಿ ಅತಿಕ್ರಮಣ ಮಾಡಿವೆ ಎಂದು ವರದಿ ಸಲ್ಲಿಸಲಾಗಿದೆ. ಕರ್ನಾಟಕ ಹಾಗೂ ಆಂಧ್ರಪ್ರದೇಶ ನಡುವಿನ ಗಡಿ ನಾಶಪಡಿಸಿದ ಆರೋಪ ಕೇಳಿ ಬಂದಿದೆ.
ಬಳ್ಳಾರಿ ಮೀಸಲು ಅರಣ್ಯ ಪ್ರದೇಶಗಳಾದ ವಿಠಲಾಪುರ, ತುಮಟಿ ಸೇರಿದಂತೆ ವಿವಿಧೆಡೆ ಅಕ್ರಮವಾಗಿ 28.9 ಲಕ್ಷ ಟನ್ ಅಕ್ರಮ ಅಧಿರು ಸಾಗಾಟ ಮಾಡಲಾಗಿದೆ. ಅಕ್ರಮ ಸಾಬೀತು ಗಾಗಿ ಸಿಬಿಐ ವಿಚಾರಣಾಧೀನ ಕೋರ್ಟ್ ಶಿಕ್ಷೆ ಪ್ರಕಟಿಸಿತ್ತು. ಅಮಿಕಸ್ ಕ್ಯೂರಿ ಆಂಧ್ರದ ಸಮಿರೆಡ್ಡಿ ವರದಿ ಅನ್ವಯ ಹೊಸ ಸಮಿತಿಯನ್ನು ನ್ಯಾಯಾಲಯ ರಚನೆ ಮಾಡಿತ್ತು. ನಿವೃತ್ತ ನ್ಯಾಯಮೂರ್ತಿ ದುಲಿಯ ಸಮಿತಿ ವರದಿಯಲ್ಲೂ ಅತಿಕ್ರಮಣ ಆಗಿದ್ದು ದೃಢಪಟ್ಟಿದೆ. ಹೀಗಾಗಿ ಗಂಗಾವತಿ ಶಾಸಕ ಜನಾರ್ಧನ ರೆಡ್ಡಿಗೆ ಮತ್ತಷ್ಟು ಸಂಕಷ್ಟ ಎದುರಾಗಿದೆ.
ವರದಿಗೆ ಗಣಿ ಗುತ್ತಿಗೆ ಮಾಲೀಕರಿಂದ ಅಕ್ಷೇಪಣೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದ್ದು ಈ ಸಂಬಂಧ ಜನವರಿದ್ದಾರೆಂದು ದೆಹಲಿಯಲ್ಲಿ ಸಭೆ ನಡೆಯಲಿದೆ. ಒಂದು ವೇಳೆ ದಾಖಲೆ ಸಲ್ಲಿಸದಿದ್ದರೆ ದುಲಿಯ ಸಮಿತಿ ವರದಿ ಮೂರು ತಿಂಗಳೊಳಗೆ ಅಂತಿಮವಾಗಲಿದ್ದು ನಿವೃತ್ತ ನ್ಯಾಯಮೂರ್ತಿ ದುಲಿಯ ಸಮಿತಿ ವರದಿ ಆಧರಿಸಿ ಶಿಕ್ಷೆ ಪ್ರಕಟ ಆಗುವ ಸಾಧ್ಯತೆ ಇದೆ.








