ರಾಯಚೂರು : ಯುಗಾದಿ ಹಬ್ಬದ ಅಂಗವಾಗಿ ಕಾಡು ಪ್ರಾಣಿಗಳನ್ನು ಬೇಟಿಯಾಡಿ ವನ್ಯಜೀವಿಗಳ ಸಂರಕ್ಷಣಾ ಕಾಯ್ದೆಯನ್ನು ಉಲ್ಲಂಘಿಸಿರುವ ಆರೋಪ ಇದೀಗ ಕಾಂಗ್ರೆಸ್ ಶಾಸಕನ ಪುತ್ರ ಮತ್ತು ಸಹೋದರ ವಿರುದ್ಧ ಈ ಒಂದು ಆರೋಪ ಕೇಳಿ ಬಂದಿದೆ.
ಯುಗಾದಿ ಹಬ್ಬದ ಅಂಗವಾಗಿ ಶಾಸಕರ ಪುತ್ರ, ಸಹೋದರ ಕಾಡು ಪ್ರಾಣಿಗಳ ಬೇಟೆಯಾಡಿ, ಮೆರವಣಿಗೆ ಮಾಡಿರುವ ಆರೋಪ ಕೇಳಿ ಬಂದಿದೆ. ವನ್ಯಜೀವಿ ಸಂರಕ್ಷಣಾ ಕಾಯ್ದೆಯನ್ನು ಉಲ್ಲಂಘಿಸಿದ ಆರೋಪ ಶಾಸಕರ ಪುತ್ರ ಮತ್ತು ಸಹೋದರ ಮೇಲೆ ಬಂದಿದ್ದು, ಮಸ್ಕಿ ಕಾಂಗ್ರೆಸ್ ಶಾಸಕ ಆರ್.ಬಸನಗೌಡ ತುರುವಿಹಾಳ ಪುತ್ರ ಮತ್ತು ಸಹೋದರ ಮೊಲಗಳ ಬೇಟೆಯಾಡಿ ಅವುಗಳನ್ನು ಕಟ್ಟಿಗೆ ಕಟ್ಟಿ ಮೆರವಣಿಗೆ ಮಾಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.
ಶಾಸಕರ ಪುತ್ರ ಮತ್ತು ಸಹೋದರನ ನೇತೃತ್ವದಲ್ಲಿ ಮೂಲಗಳ ಭೇಟಿ ಮತ್ತು ಮೆರವಣಿಗೆ ನಡೆದಿದೆ. ಸಿಂಧನೂರು ತಾಲೂಕಿನ ತುರ್ವಿಹಾಳ ಪಟ್ಟಣದಲ್ಲಿ ಮೊಲಗಳನ್ನು ಬೇಟೆಯಾಡಿ ಕಟ್ಟಿಗೆ ಕಟ್ಟಿ ಮೆರವಣಿಗೆ ನಡೆಸಿದ್ದಾರೆ. ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ತುರ್ವಿಹಾಳ ಪಟ್ಟಣದಲ್ಲಿ ಮೊಲಗಳನ್ನು ಬೇಟೆಯಾಡಿದ್ದು ಅಲ್ಲದೆ ಅವುಗಳನ್ನು ಕಟ್ಟಿಗೆಗೆ ಕಟ್ಟಿ ಮೆರವಣಿಗೆ ಮಾಡಿದ್ದಾರೆ. ಹಾಗಾಗಿ ಶಾಸಕ ಆರ್ ಬಸನಗೌಡ ತುರುವಿಹಾಳ ಪುತ್ರ ಮತ್ತು ಸಹೋದರ ವನ್ಯಜೀವಿ ಸಂರಕ್ಷಣಾ ಕಾಯ್ದೆಯನ್ನು ಉಲ್ಲಂಘಿಸಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.