ಚೆನ್ನೈ : ಅತ್ಯಾಚಾರ ಪ್ರಕರಣದಲ್ಲಿ ಸಿಪಿಎಂ ಶಾಸಕ ಹಾಗೂ ಮಲಯಾಳಂ ನಟ ಎಂ.ಮುಖೇಶ್ ಅವರನ್ನು ಎಸ್ಐಟಿ ಬಂಧಿಸಿದ್ದು, ಜಾಮೀನಿನ ಮೇಲೆ ಬಿಡುಗಡೆ ಮಾಡಿದೆ.
ಅತ್ಯಾಚಾರ ಪ್ರಕರಣದಲ್ಲಿ ಮಲಯಾಳಂ ನಟನ ಬಂಧನ ಪೂರ್ವ ಜಾಮೀನು ನೀಡಿದ ಕೇರಳದ ಎರ್ನಾಕುಲಂನ ಜಿಲ್ಲಾ ಸೆಷನ್ಸ್ ನ್ಯಾಯಾಲಯವು, ದೂರುದಾರರು ತಮ್ಮ ಮೊದಲ ಹೇಳಿಕೆಯಲ್ಲಿ ಬಲವಂತದ ಲೈಂಗಿಕ ಸಂಭೋಗದ ಬಗ್ಗೆ ಉಲ್ಲೇಖಿಸಿಲ್ಲ ಮತ್ತು ಜಾಮೀನು ಅರ್ಜಿಯ ಆರಂಭಿಕ ವಿಚಾರಣೆಯ ನಂತರವೇ ಬಲಪ್ರಯೋಗದ ಆರೋಪವನ್ನು ಮಾಡಿದ್ದಾರೆ ಎಂದು ಅಭಿಪ್ರಾಯಪಟ್ಟಿದೆ.
ಮಲಯಾಳಂ ಚಲನಚಿತ್ರೋದ್ಯಮದಲ್ಲಿ ಮಹಿಳೆಯರು ಎದುರಿಸುತ್ತಿರುವ ಸಮಸ್ಯೆಗಳಲ್ಲಿ ವ್ಯಾಪಕ ಲೈಂಗಿಕ ದುರ್ವರ್ತನೆಯೂ ಒಂದು ಎಂದು ಎತ್ತಿ ತೋರಿಸುವ ಹೇಮಾ ಸಮಿತಿಯ ವರದಿ ಬಿಡುಗಡೆಯಾದ ಹಿನ್ನೆಲೆಯಲ್ಲಿ ಹೊರಹೊಮ್ಮಿದ ಹಲವಾರು ಪ್ರಕರಣಗಳಲ್ಲಿ ಮುಖೇಶ್ ವಿರುದ್ಧದ ಜಾಮೀನು ರಹಿತ ಪ್ರಕರಣವೂ ಒಂದಾಗಿದೆ.
ರಾಜ್ಯದ ಜನರ ‘ಶ್ರೀರಕ್ಷೆ’ ನನ್ನ ಮೇಲಿದೆ,ಈ ಹೋರಾಟದಲ್ಲಿ ಅಂತಿಮವಾಗಿ ಸತ್ಯಕ್ಕೆ ಜಯ ಸಿಗಲಿದೆ : ಸಿಎಂ ಸಿದ್ದರಾಮಯ್ಯ