ವಿಜಯಪುರ : ಯುವಕ ಚುಡಾಯಿಸಿದ್ದಕ್ಕೆ ಮನನೊಂದು ಬಾಲಕಿ ಆತ್ಮಹತ್ಯೆ ಮಾಡಿಕೊಂಡಿದ್ದು, ಮನೆಯಲ್ಲಿ ನೇಣು ಬಿಗಿದುಕೊಂಡು ಅಪ್ರಾಪ್ತೆ ಬಾಲಕಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನಲ್ಲಿ ನಡೆದಿದೆ.
ಕಳೆದ ಹಲವಾರು ದಿನಗಳಿಂದ ಅಪ್ರಾಪ್ತೆಯ ಹಿಂದೆ ಯುವಕ ಬಿದ್ದಿದ್ದ. ಪ್ರೀತಿ ಪ್ರೇಮದ ಹೆಸರಿನಲ್ಲಿ ಬಾಲಕಿಗೆ ಸಂಗಮೇಶ್ ಜಂಜವಾರ್ ಕಿರುಕುಳ ನೀಡಿದ್ದಾನೆ. ಕಾಲೇಜಿಗೆ ತೆರಳುತ್ತಿದ್ದ ವೇಳೆ ಹಿಂಬಾಲಿಸಿ ಸಂಗಮೇಶ್ ಬಾಲಕಿಗೆ ಚುಡಾಯಿಸುತ್ತಿದ್ದ. ಅಲ್ಲದೇ ಅಪ್ರಾಪ್ತೆಯ ಜೊತೆಗೆ ಅಸಭ್ಯವಾಗಿ ವರ್ತಿಸಿ ಕಿರುಕುಳ ನೀಡಿರುವ ಆರೋಪ ಕೇಳಿ ಬಂದಿದೆ.
ನನ್ನ ಪ್ರೀತಿಸು ಎಂದು ಬಾಲಕಿಗೆ ಸಂಗಮೇಶ್ ಬಲವಂತ ಮಾಡುತ್ತಿದ್ದ. ಸಂಗಮೇಶನನ್ನು ಪ್ರಶ್ನಿಸಿದ್ದ ಬಾಲಕಿಯ ಸಹೋದರಿಯ ಮೇಲೆ ಕೂಡ ಆತ ಹಲ್ಲೆ ಮಾಡಿದ್ದ. ಅಲ್ಲದೆ ಸಂಗಮೇಶ ವಿರುದ್ಧ ಜೀವ ಬೆದರಿಕೆ ಹಾಕಿ ಹಲ್ಲೆ ಮಾಡಿದ್ದ ಆರೋಪ ಕೇಳಿ ಬಂದಿದೆ. ಈ ಕುರಿತಂತೆ ನವೆಂಬರ್ 27ರಂದು ಮುದ್ದೇಬಿಹಾಳ ಠಾಣೆಯಲ್ಲಿ ಅಪ್ರಾಪ್ತ ಬಾಲಕಿ ದೂರು ನೀಡಿದ್ದಾಳೆ.
ಸಂಗಮೇಶ್, ಮೌನೇಶ್ ಮಾದರ ಹಾಗೂ ಚಿದಾನಂದ ಕಟ್ಟಿಮನಿ ವಿರುದ್ಧ ದೂರು ಸಲ್ಲಿಸಿದ್ದಾಳೆ. ಮೂವರ ವಿರುದ್ಧ ಪೊಲೀಸರು ಇದೀಗ ಪೋಕ್ಸೋ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಪ್ರಕರಣ ಸಂಬಂಧ ಮೂವರನ್ನು ಬಂಧಿಸಿದ್ದಾರೆ. ಅಪ್ರಾಪ್ತೆ ಬಾಲಕಿ ಸಾವಿಗೆ ಯುವಕರ ಕಿರುಕುಳಗೆ ಕಾರಣ ಎಂದು ಆರೋಪಿಸಲಾಗಿದೆ. ಮುದ್ದೇಬಿಹಾಳ ಠಾಣೆಯ ಮುಂದೆ ಸದ್ಯ ಬಾಲಕಿಯ ಪೋಷಕರು ಗ್ರಾಮಸ್ಥರು ಆರೋಪ ಮಾಡುತ್ತಿದ್ದಾರೆ.