ಬೆಂಗಳೂರು : ರಾಜ್ಯ ರಾಜಕಾರಣದಲ್ಲಿ ಬಹುದೊಡ್ಡ ಬದಲಾವಣೆ ನಡೆದಿದ್ದು, ಸಂಪುಟ ಪುನಾರ ರಚನೆ ಕುರಿತು ಇದೀಗ ಕೂಗು ಕೇಳು ಬರುತ್ತಿದೆ. ಅಧಿಕಾರ ಹಸ್ತಾಂತರದ ಮಧ್ಯೆ ಸಂಪುಟ ವಿಸ್ತರಣೆ ಕೂಗು ಸಹ ಕೇಳಿ ಬಂದಿದೆ. ಇದೀಗ ಮೊದಲ ಬಾರಿಗೆದ್ದಂತಹ 31 ಶಾಸಕರು ಕಾಂಗ್ರೆಸ್ ಹೈಕಮಾಂಡ್ಗೆ ಪತ್ರ ಬರೆದಿದ್ದಾರೆ.
ಹೌದು ಇದೀಗ ರಾಜ್ಯ ಕಾಂಗ್ರೆಸ್ ನಲ್ಲಿ ಯಾವಾಗ ಬೇಕಾದರೂ ಯಾವ ಬೆಳವಣಿಗೆ ನಡೆದರೂ ಕೂಡ ಅಚ್ಚರಿಪಡಬೇಕಿಲ್ಲ. ಕಾಂಗ್ರೆಸ್ ನಲ್ಲಿ ಸಂಪುಟ ಪುನಾರಚನೆ ಕುರಿತು ಕಾಂಗ್ರೆಸ್ ಹೈಕಮಾಂಡ್ಗೆ ಮೊದಲ ಬಾರಿ ಗೆದ್ದ ಶಾಸಕರು ಪತ್ರ ಬರೆದಿದ್ದಾರೆ. ರಾಹುಲ್ ಗಾಂಧಿ ಹಾಗೂ ರಣದೀಪ ಸಿಂಗ್ ಸುರ್ಜೆವಾಲಗೆ ಶಾಸಕರು ಪತ್ರ ಬರೆದಿದ್ದಾರೆ.
ಮೊದಲ ಬಾರಿ ಗೆದ್ದ ಶಾಸಕರಿಂದ ರಾಹುಲ್ ಗಾಂಧಿಗೆ ಪತ್ರ ಬರೆಯಲಾಗಿದೆ. ನಮಗೂ ಸಂಪುಟದಲ್ಲಿ ಅವಕಾಶ ಕೊಡಿ ಎಂದು ಶಾಸಕರು ಪತ್ರದಲ್ಲಿ ಮನವಿ ಮಾಡಿದ್ದಾರೆ. ಹೈಕಮಾಂಡ್ ತಟ್ಟಿದ ಮೊದಲ ಬಾರಿ ಗೆದ್ದ ಶಾಸಕರು, 5 ಹೊಸ ಶಾಸಕರಿಗೆ ಸಚಿವ ಸ್ಥಾನ ನೀಡಲು ಬೇಡಿಕೆ ಇಟ್ಟಿದ್ದಾರೆ. ಹಾಗಾಗಿ ಈ ಒಂದು ಬೆಳವಣಿಗೆ ರಾಜ್ಯ ರಾಜಕಾರಣದಲ್ಲಿ ಯಾವ ಬದಲಾವಣೆ ಆಗಲಿದೆ ಎನ್ನುವುದು ಕುತೂಹಲ ಮೂಡಿಸಿದೆ.
ಪತ್ರದಲ್ಲೇನಿದೆ?
ಕಾಂಗ್ರೆಸ್ ನಿಂದ ಮೊದಲ ಬಾರಿ 38 ಶಾಸಕರು ಆಯ್ಕೆಯಾಗಿದ್ದಾರೆ. ಯುವ ಮುಖಗಳು ಅವಶ್ಯಕತೆ ಇದೆ ಎಂದು ಜನ ಹೇಳುತ್ತಿದ್ದಾರೆ ಮೊದಲ ಬಾರಿ ಆಯ್ಕೆಯಾದ ಶಾಸಕರಿಗೆ ಸಚಿವ ಸ್ಥಾನ ನೀಡಿ ಜನದೇಶಕ್ಕೆ ಮನ್ನಣೆ ನೀಡುವಂತೆ ಮನವಿ ಮಾಡಿದ್ದಾರೆ. ಯುವಕರಿಗೆ ಅವಕಾಶ ನೀಡುವುದು ಈ ಕ್ಷಣಕ್ಕೆ ಬೇಡಿಕೆ ಆಗಿದೆ , ದೇಶದ ಇತರ ಸರ್ಕಾರಗಳಲ್ಲಿ ಸಿಎಂ ಆಗಿದ್ದಾರೆ ಯುವಕರಿಗೆ ಅವಕಾಶ ನೀಡುವುದು ಪ್ರಸ್ತುತ ವಿದ್ಯಮಾನವಾಗಿದೆ ಮುಂಬರುವ ಚುನಾವಣೆ ಗೆಲ್ಲಲು ಇದು ಸಹಕಾರಿ ಆಗಲಿದೆ ಎಂದು ಪತ್ರದಲ್ಲಿ ಮೊದಲ ಬಾರಿ ಗೆದ್ದ ಶಾಸಕರು ಉಲ್ಲೇಖ ಮಾಡಿದ್ದಾರೆ.








