ಬಾಗಲಕೋಟೆ : ಅಕ್ರಮವಾಗಿ ಸಂಗ್ರಹಿಸಿದ್ದ ಮಿನಿ ಸಿಲಿಂಡರ್ ಗಳು ಸ್ಪೋಟಗೊಂಡಿದ್ದು ಬಾಗಲಕೋಟೆ ಜಿಲ್ಲೆಯ ಬಾದಾಮಿಯ ಶಿವಾಜಿ ಸರ್ಕಲ್ ಬಳಿ ಈ ಒಂದು ದುರ್ಘಟನೆ ಸಂಭವಿಸಿದೆ. ಸ್ಫೋಟದ ತೀವ್ರತೆಗೆ ಮೂರರಿಂದ ನಾಲ್ಕು ಜನರಿಗೆ ಗಂಭೀರವಾದ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಸ್ಪೋಟ ಕಂಡು ಜನರು ಮತ್ತು ಹೋಂ ಗಾರ್ಡ್ ಗಳಿಗೆ ಸಹ ಓಡಿ ಹೋಗಿದ್ದಾರೆ ದಾದಾಪೀರ್ ಜಮಾದಾರ್ ಅಂಗಡಿಯಲ್ಲಿದ್ದ 5 ಕೆಜಿ ಸಿಲಿಂಡರ್ ಗಳು ಸ್ಪೋಟಗೊಂಡಿವೆ. ಸ್ಥಳಕ್ಕೆ ಬಾದಾಮಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ದೊಡ್ಡಮಟ್ಟದ ಬೆಂಕಿ ಆವರಿಸಿದ್ದು ಈ ರಸ್ತೆಯುವುದಕ್ಕೂ ಬೆಂಕಿ ಆವರಿಸಿತ್ತು.