ಬೆಂಗಳೂರು : ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನಲ್ಲಿರುವ ಅಲಯನ್ಸ್ ವಿಶ್ವವಿದ್ಯಾಲಯದಲ್ಲಿ ದಾಖಲೆ ತಿರುಚಿ ವಂಚನೆ ಎಸೆಗಿರುವ ಘಟನೆ ಬೆಳಕಿಗೆ ಬಂದಿದೆ. ವಿದ್ಯಾರ್ಥಿಗಳ ಬಳಿ ಹಣ ಪಡೆದು ಹಾಜರಾತಿ ಹಾಕಿ ಕಳ್ಳಾಟ ಮಾಡಿದ್ದಾರೆ ಕಾಲೇಜಿಗೆ ಬಾರದಿದ್ದರು ಕೂಡ ಸಿಬ್ಬಂದಿಗಳು ಹಾಜರಾತಿ ಕೊಡುತ್ತಿದ್ದರು ಸಿಬ್ಬಂದಿ ವಿದ್ಯಾರ್ಥಿಗಳ ಮೇಲೆ ಇದೀಗ ಕ್ರಿಮಿನಲ್ ಕೇಸ್ ದಾಖಲಾಗಿದೆ.
ಕಾಲೇಜು ಆಡಳಿತ ಮಂಡಳಿಯಿಂದ ಸಿಬ್ಬಂದಿಗಳು ಮತ್ತು ಹಾಗೂ ವಿದ್ಯಾರ್ಥಿಗಳ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಾಗಿದೆ. ನವೆಂಬರ್ 25 ರಂದು ಆನೇಕಲ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ದಾಖಲೆಗಳನ್ನು ತಿರುಚಿ ವಂಚನೆ ಮಾಡಿರುವುದು ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳ ಮೇಲೆ ಆರೋಪ ಕೇಳಿಬಂದಿದೆ. ವಿದ್ಯಾರ್ಥಿಗಳಿಂದ ಹಣ ಪಡೆದು ಹಾಜರಾತಿ ಕಲಾಟ ಮಾಡುತ್ತಿದ್ದರು ಎಂದು ಆರೋಪ ಕೇಳಿ ಬಂದಿದೆ.
ಸಿಬ್ಬಂದಿ ಮೌನೇಶ್ ಬಾಬು, ಹಳೆಯ ವಿದ್ಯಾರ್ಥಿ ಕಿಶೋರ್ ಬಿಟೆಕ್ ವಿದ್ಯಾರ್ಥಿಗಳಾದ ತರುಣ್ ವಿನೋದ್, ತ್ರೀಣಯ್ಯನ ರೆಡ್ಡಿ ಪ್ರವೀಣ್, ಕುಮಾರ್ ರೆಡ್ಡಿ ಹೀಗೆ ಆರು ಮಂದಿ ವಿರುದ್ಧ ಪ್ರಕರಣ ಸಿಬ್ಬಂದಿ ಮೌನೇಶ್ ಕ್ರಿಮಿನಲ್ ಪ್ರಕರಣ ದಾಖಲಾಗಿದ್ದು ಡಿಜಿಟಲ್ ಸೈನ್ ಕದ್ದು ಹಾಜರಾತಿ ಹಾಕಿಸುತ್ತಿದ್ದ. ಇನ್ನು ವಿದ್ಯಾರ್ಥಿಗಳ ಬಳಿ ಕಿಶೋರ್ ಲಕ್ಷ ಲಕ್ಷ ಹಣ ಪಡೆದುಕೊಳ್ಳುತ್ತಿದ್ದ.ಮಾರ್ಚ್ ಇಂದ ನವೆಂಬರ್ ವರೆಗೂ ಈ ರೀತಿ ಲಕ್ಷಾಂತರ ರೂಪಾಯಿ ಆಗಿದೆ ಎಂದು ತಿಳಿದುಬಂದಿದೆ. ಹಾಜರಾತಿಗಾಗಿ ಲಕ್ಷಾಂತರ ರೂಪಾಯಿ ದುಡ್ಡು ಪಡೆದುಕೊಳ್ಳುತ್ತಿದ್ದರು ಎಂದು ತಿಳಿದುಬಂದಿದೆ.








