ಚಿಕ್ಕಬಳ್ಳಾಪುರ : ಮುಂಬೈನ ಎನ್ಕೌಂಟರ್ ಸ್ಪೆಷಲಿಸ್ಟ್ ದಯಾನಾಯಕ್ ಹೆಸರಿನಲ್ಲಿ ಲಕ್ಷಾಂತರ ರೂಪಾಯಿ ವಂಚನೆ ಎಸಗಿರುವ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ. ಚಿಕ್ಕಬಳ್ಳಾಪುರದ ಬಿಕೆ ರಾಮಚಂದ್ರಪ್ಪ ದಂಪತಿಗಳಿಗೆ 12, 63, 000 ವಂಚನೆ ಎಸಗಲಾಗಿದೆ. ಬಿಕೆ ರಾಮಚಂದ್ರಪ್ಪ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ನಿವೃತ್ತ ಅಧಿಕಾರಿಯಾಗಿದ್ದಾರೆ.
ಮನಿ ಲ್ಯಾಂಡ್ ರಿಂಗ್ ಕಾಯ್ದೆಯ ಅಡಿ ಬಂಧಿಸುವುದಾಗಿ ಹೆದರಿಸಿ ಲಕ್ಷಾಂತರ ರೂಪಾಯಿ ವಂಚನೆ ಎಸಗಿದ್ದಾರೆ. ದಯಾ ನಾಯಕರಂತೆ ವಿಡಿಯೋ ಕಾಲ್ ನಲ್ಲಿ ನಟಿಸಿ ವಂಚಕರಿಂದ ಬೆದರಿಕೆ ಹಾಕಿದ್ದು, ಮುಂಬೈ ಕೋಬ್ಲಾ ಪೊಲೀಸ್ ಠಾಣೆಯಿಂದ ಕರೆ ಮಾಡಿದ್ದೇವೆ ಎಂದು ದಂಪತಿಗೆ ಬೆದರಿಕೆ ಹಾಕಿದ್ದಾರೆ. ವಂಚಕರಿಗೆ ಬೆದರಿ ಬ್ಯಾಂಕ್ ನಲ್ಲಿದ್ದ ಚಿನ್ನಾಭರಣ ಇಟ್ಟು ದಂಪತಿಗಳು ಹಣ ಪಡೆದಿದ್ದಾರೆ. ಚಿನ್ನಾಭರಣದ ಹಣವನ್ನು ವಂಚಕರ ಬ್ಯಾಂಕ್ ಖಾತೆಗೆ ಹಾಕಿದ್ದಾರೆ.ಈ ಕುರಿತು ಚಿಕ್ಕಬಳ್ಳಾಪುರ ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.