ತುಮಕೂರು : ತುಮಕೂರಿಗೆ ಶೀಘ್ರ ಮೆಟ್ರೋ ಯೋಜನೆ ಬರುತ್ತದೆ.ಅದು ಇಡೀ ತುಮಕೂರಿನ ಚಿತ್ರಣವನ್ನೇ ಬದಲಾವಣೆ ಮಾಡುತ್ತದೆ. ಇನ್ನು ಕೆಲವೇ ದಿನಗಳಲ್ಲಿ ತುಮಕೂರು ಬೆಂಗಳೂರಿನ ಎರಡನೇ ನಗರವಾಗಿ ಬೆಳೆಯುವುದು ಗ್ಯಾರಂಟಿ ಎಂದು ಕೇಂದ್ರ ಸಚಿವ ವಿ.ಸೋಮಣ್ಣ ತಿಳಿಸಿದರು.
ಇಂದು ಜಿಲ್ಲೆಯಲ್ಲಿ ರೇಲ್ವೆ ಕಾಮಗಾರಿ ಪರಿಶೀಲನೆ ನಡೆಸಡಿಯಾ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈಗಾಗಲೇ ಬಿಎಂಆರ್ಸಿಎಲ್ ವರದಿ ಕೊಟ್ಟಿದ್ದು, ನಮ್ಮ ಕಾಲದಲ್ಲೇ ಕಾರ್ಯರೂಪಕ್ಕೆ ತರುವ ಕೆಲಸ ಆಗುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಕೇಂದ್ರ ಸರ್ಕಾರದಿಂದ ಬರುವ ಎಲ್ಲಾ ಸವಲತ್ತುಗಳು ತುಮಕೂರಿನ ಜನತೆಗೆ ಸಿಗಬೇಕು ಎಂದರು.
ಇನ್ನೊಂದು ತಿಂಗಳಿನಲ್ಲಿ ತುಮಕೂರಿನ ಜನತೆಗೆ ಒಂದು ದೊಡ್ಡ ಸುದ್ದಿ ಕೊಡುತ್ತೇನೆ. ಬೆಂಗಳೂರು ಟು ಚೆನ್ನೈ ಕಾರಿಡಾರ್ ಯೋಜನೆ ನಿರ್ಮಾಣ ಮಾಡಲಾಗುತ್ತಿದೆ. ಸುಮಾರು 8484 ಎಕರೆ ಪ್ರದೇಶದಲ್ಲಿ ಪಿಎಂ ಗತಿಶಕ್ತಿ ಯೋಜನೆ ಅಡಿಯಲ್ಲಿ ಇದು ನಿರ್ಮಾಣವಾಗುತ್ತಿದೆ. ಒಟ್ಟು ಮೂರು ಹಂತದಲ್ಲಿ ಅಭಿವೃದ್ಧಿಗೆ ಪ್ರಧಾನಿ ಮೋದಿಯವರಿಂದ ಚಾಲನೆ ಕೊಡಲಾಗಿದೆ. ಈಗ ಮೊದಲನೇಯ ಹಂತದ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ತಿಳಿಸಿದರು.