ಲಾಹೋರ್ : ಆಪರೇಷನ್ ಸಿಂಧೂರ್ ಬಳಿಕ ಸಹಜವಾಗಿ ಪಾಕಿಸ್ತಾನ ಭಾರತಕ್ಕೆ ಬೆಚ್ಚಿ ಬಿದ್ದಿದೆ ಈಗಾಗಲೇ ಪಾಕಿಸ್ತಾನದ ಉಗ್ರರ ಕ್ಯಾಂಪ್ ಗಳ ಮೇಲೆ ಭಾರತೀಯ ಸೇನೆ ಕ್ಷಿಪಣಿ ದಾಳಿ ನಡೆಸಿದ್ದು ನೂರಕ್ಕೂ ಹೆಚ್ಚು ಉಗ್ರರು ಸಾವನ್ನಪ್ಪಿದ್ದಾರೆ ಇದೀಗ ಪಾಕಿಸ್ತಾನದ ಲಾಹೋರ್ ನಲ್ಲಿ ಮೂರು ಸರಣಿ ಸ್ಫೋಟ ಸಂಭವಿಸಿದೆ.
ಹೌದು ಪಾಕಿಸ್ತಾನದ ಲಾಹೋರ್ ನಗರದ ಮೂರು ಕಡೆಗೆ ಭಾರಿ ಸರಣಿ ಸ್ಫೋಟ ಸಂಭವಿಸಿದೆ. ಸ್ಫೋಟದಿಂದ ಲಾಹೋರ್ ನಿವಾಸಿಗಳು ಬೆಚ್ಚಿ ಬಿಚ್ಚಿದ್ದಾರೆ. ಸೈರನ್ ಮೊಳಗಿದ ಬಳಿಕ ಏಕಾಏಕಿ ಸ್ಪೋಟದ ಸದ್ದು ಕೇಳಿಸಿದೆ. ಲಾಹೋರ್ ಓಲ್ಡ್ ಏರ್ಪೋರ್ಟ್ ಸೇರಿದಂತೆ ಮೂರು ಕಡೆ ಸರಣಿ ಸ್ಫೋಟ ಸಂಭವಿಸಿದೆ.