ಬೆಂಗಳೂರು : ಬೆಂಗಳೂರಲ್ಲಿ ಸಿಸಿಬಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಸುಮಾರು 7.8 ಕೋಟಿ ರೂಪಾಯಿ ಮೌಲ್ಯದ ಡ್ರಗ್ಸ್ ಜಪ್ತಿ ಮಾಡಿಕೊಳ್ಳಲಾಗಿದೆ. ಎಂಡಿಎಂಎ ಕ್ರಿಸ್ಟಲ್ 3.8 ಕೆಜಿ ಹಾಗೂ ಎಂಡಿಎಂಎ ಬ್ರೌನ್ ವೈಟ್ ಡ್ರಗ್ಸ್ ಜಪ್ತಿ ಮಾಡಿದ್ದಾರೆ.
ಇನ್ನು ದಾಳಿಯ ವೇಳೆ 42 ಗ್ರಾಂ ತೂಕದ 82 ಎಕ್ಸೆಟ್ಸಿ ಮಾತ್ರೆಗಳು, 23 ಕೆಜಿ ಗಾಂಜಾ, ಹಾಗು 482 ಗ್ರಾಂ ಹೈಡ್ರೋ ಗಾಂಜಾ ವಶಕ್ಕೆ ಪಡೆದಿದ್ದಾರೆ ಇನ್ನು ನೈಜೀರಿಯಾ ಮೂಲದ ಇಬ್ಬರು ಆರೋಪಿಗಳನ್ನು ಸಿಸಿಬಿ ಪೊಲೀಸರು ಇದೆ ವೇಳೆ ಅರೆಸ್ಟ್ ಮಾಡಿದ್ದಾರೆ. ಕೆಮಿನ್ ರೋಜರ್ ಮತ್ತು ಥಾಮಸ್ ನವೀದ್ ಬಂಧಿತರು. ಸಿಸಿಬಿ ಮತ್ತು ಮಹದೇವಪುರ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿದೆ.
ಈ ಇಬ್ಬರು ಆರೋಪಿಗಳು ದೆಹಲಿ ಮತ್ತು ಮುಂಬೈನಿಂದ ಡ್ರಗ್ಸ್ ತರಿಸುತ್ತಿದ್ದರು. ಹೆಬ್ಬಗೋಡಿಯ ಮನೆ ಒಂದರಲ್ಲಿ ಡ್ರಗ್ಸ್ ಡೀಲ್ ಮಾಡುತ್ತಿದ್ದರು. ವಾಟ್ಸಾಪ್ ಮೂಲಕ ಲೊಕೇಶನ್ ಡ್ರಾಪ್ ಮಾಡಿ ಡ್ರಗ್ಸ್ ಮಾರಾಟ ಮಾಡುತ್ತಿದ್ದರು. ಟೆಕ್ಕಿಗಳು, ವಿದ್ಯಾರ್ಥಿಗಳಿಗೆ ಡ್ರಗ್ಸ್ ಮಾರಾಟ ಮಾಡುತ್ತಿದ್ದರು. ಇತ್ತೀಚಿಗಷ್ಟೇ ಆರೋಪಿಗಳಾದ ಕೆವಿನ್ ಮತ್ತು ಥಾಮಸ್ ಭಾರತಕ್ಕೆ ಬಂದಿದ್ದರು. ಅಪರಿಚಿತ ಸ್ಥಳಗಳಲ್ಲಿ ಆರೋಪಿಗಳು ಡ್ರಗ್ಸ್ ಪಾರ್ಸೆಲ್ ಇಡುತ್ತಿದ್ದರು. ಬಳಿಕ ಡ್ರಗ್ಸ್ ಇಟ್ಟಿದ್ದ ಲೊಕೇಶನ್ ಗಳಿಗೆ ಗಿರಾಕಿಗಳನ್ನು ಕಳುಹಿಸುತ್ತಿದ್ದರು.








