ಕಲಬುರ್ಗಿ : ಬಿಜೆಪಿ ಅಧಿಕಾರದಲ್ಲಿ ಅವಧಿಯಲ್ಲಿ ಕೆಕೆಆರ್‌ಡಿಬಿ ಹಗರಣದ ತನಿಖೆಗೆ ಸಂಬಂಧಪಟ್ಟಂತೆ 2 ವರ್ಷಗಳ ಸುದೀರ್ಘ ತನಿಖೆ ಬಳಿಕ ಸರ್ಕಾರಕ್ಕೆ ವರದಿ ಸಲ್ಲಿಕೆಯಾಗಿದೆ. ನಿವೃತ್ತ IAS ತನಿಖಾ ತಂಡ 180 ಪುಟಗಳ ವರದಿಯನ್ನು ತನಿಖಾ ತಂಡ ಇದೀಗ ಸರ್ಕಾರಕ್ಕೆ ವರದಿ ಸಲ್ಲಿಸಿದೆ 2020 ರಿಂದ 2023ರ ವರೆಗೆ ನೂರಾರು ಕೋಟಿ ಅಕ್ರಮ ನಡೆದಿದ್ದು ಕಲ್ಯಾಣ ಕರ್ನಾಟಕದ 7 ಜಿಲ್ಲೆಗಳಲ್ಲಿ ಈ ಒಂದು ಅಕ್ರಮ ನಡೆದಿತ್ತು.
ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಸಾಂಸ್ಕೃತಿಕ ಸಂಘಕ್ಕೆ ನೀಡಿದ ಅನುದಾನ ದುರ್ಬಳಕೆ ಆಗಿದೆ ಎನ್ನುವ ಆರೋಪ ಕೇಳಿ ಬಂದಿದೆ. ಅಕ್ರಮದ ಕುರಿತು ಸಿಎಂ ಸಿದ್ದರಾಮಯ್ಯ ತನಿಖೆಗೆ ಸೂಚಿಸಿದರು. ಕೆಕೆಆರ್ಡಿಬಿ ಹಣ ಆರ್ ಎಸ್ ಎಸ್ ಚಟುವಟಿಕೆಗೆ ಬಳಸಿರುವ ಆರೋಪ ಸಹ ಕೇಳಿಬಂದಿದೆ. ಪ್ರಿಯಾಂಕ ಖರ್ಗೆ ಆರೋಪದ ಬೆನ್ನಲ್ಲೇ ಸರ್ಕಾರಕ್ಕೆ ತನಿಖಾ ತಂಡ ವರದಿ ಸಲ್ಲಿಸಿದೆ.
ಅಕ್ರಮವಾಗಿ 8ನೇ ಜಿಲ್ಲೆಯ ರಚಿಸಿದ್ದ KKHRAC ಸಂಘ. ಕಲಬುರ್ಗಿ ಸೇಡಂ ಉಪ ಪ್ರದೇಶವನ್ನೇ ಜಿಲ್ಲೆ ಎಂದು ನಮೂದು ಮಾಡಲಾಗಿತ್ತು . 7 ಜಿಲ್ಲೆಗಿಂತ ಸೇಡಂ ನಾಲ್ಕು ತಾಲೂಕು ಅನುದಾನ ಹಂಚಲಾಗಿದೆ ಖಾಸಗಿ ಸಂಘಕ್ಕೆ 32 ಕೋಟಿ ಅನುದಾನ ದುರ್ಬಳಕೆ ಆಗಿದೆ ಕಲ್ಯಾಣ ಕರ್ನಾಟಕದಲ್ಲಿ 8 ಜಿಲ್ಲೆ ಇವೆ ಎಂದು ನಮೂದು ಮಾಡಲಾಗಿತ್ತು. ಅಕ್ರಮವಾಗಿ 8ನೇ ಜಿಲ್ಲೆ ರಚಿಸಿದ್ದ KKHRAC ಸಂಘ.
ಕಲ್ಬುರ್ಗಿ ಸೇಡಂ ಒಂದೇ ಪ್ರದೇಶವನ್ನೇ ಜಿಲ್ಲೆ ಎಂದು ನಮೂದು ಮಾಡಲಾಗಿದ್ದು 7 ಜಿಲ್ಲೆಗಿಂತ ಸೇಡಂ 4 ತಾಲೂಕಿಗೆ ಕೋಟ್ಯಾಂತರ ಅನುದಾನ ಹಂಚಲಾಗಿದ್ದು 1 ಕೋಟಿ ವೆಚ್ಚದಲ್ಲಿ ಸಸಿ ನೆಡುವುದು, ದೆಸಿ ಹಸು ಸಾಗಾಣಿಕೆಗೆ ಅನುದಾನದಲ್ಲಿ ಗೋಲ್ಮಾಲ್ ಆಗಿದೆ ಭಜನೆ ಸಂಸ್ಕೃತಿಕ ಚಟುವಟಿಕೆಗಳ ವಸ್ತು ಖರೀದಿಯಲ್ಲೂ ಭಾರಿ ಅಕ್ರಮ ನಡೆದಿದೆ ಕೋವಿಡ್ ನಿಂದ ಸತ್ತ ಖಾಸಗಿ ಶಾಲಾ ಶಿಕ್ಷಕರಿಗೆ 50,000 ನೆರವು ಹೀಗೆ ಹಲವು ಭ್ರಷ್ಟಾಚಾರಗಳನ್ನು ತನಿಖಾ ತಂಡ ಬಯಲಿಗೆ ಎಳೆದಿದೆ.








