ನವದೆಹಲಿ : ದೆಹಲಿಯಲ್ಲಿ ಬೆಳ್ಳಂಬೆಳಗ್ಗೆ ಭೀಕರ ಅಗ್ನಿ ದುರಂತ ಸಂಭವಿಸಿದ್ದು, ಮೂವರು ಸಜೀವ ದಹನವಾಗಿರುವ ಘಟನೆ ನಡೆದಿದೆ.
ದೆಹಲಿಯಲ್ಲಿ ಭೀಕರ ಅಪಘಾತ ಸಂಭವಿಸಿದೆ. ಆದರ್ಶ ನಗರದ ಮಜ್ಲಿಸ್ ಪಾರ್ಕ್‌ನಲ್ಲಿರುವ ಮನೆಯೊಂದಕ್ಕೆ ಬೆಂಕಿ ಹೊತ್ತಿಕೊಂಡ ಪರಿಣಾಮ 3 ಜನರು ಸಾವನ್ನಪ್ಪಿದ್ದಾರೆ.
ಮನೆಯೊಳಗೆ ಇದ್ದ ಗಂಡ, ಹೆಂಡತಿ ಮತ್ತು ಚಿಕ್ಕ ಮಗಳ ಶವಗಳನ್ನು ಅಗ್ನಿಶಾಮಕ ದಳ ಹೊರತೆಗೆದಿದೆ. ಪ್ರಾಥಮಿಕ ತನಿಖೆಯಲ್ಲಿ ಬೆಂಕಿಗೆ ಕಾರಣ ತಿಳಿದುಬಂದಿಲ್ಲ, ಆದರೆ ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ತನಿಖೆ ನಡೆಸುತ್ತಿದ್ದಾರೆ. ಪೊಲೀಸರು ಶವಗಳನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.
Delhi | Three people belonging to the same family died following a fire incident at a Delhi Metro staff quarter in the Adarsh Nagar area of Delhi. According to the fire department, they received a call at 2:39 am regarding a fire in the residential quarters of the Delhi Metro…
— ANI (@ANI) January 6, 2026








