ಉತ್ತಕಕನ್ನಡ : ಝೆರಾಕ್ಸ್ ಅಂಗಡಿಗೆ ಒಂದರಲ್ಲಿ ಕಾಣಿಸಿಕೊಂಡ ಆಕಸ್ಮಿಕ ಬೆಂಕಿಯಿಂದ, ಅಕ್ಕಪಕ್ಕದ ಅಂಗಡಿ ಮುಗ್ಗಟ್ಟುಗಳು ಹಾಗೂ ಮನೆಗಳಿಗೂ ಬೆಂಕಿ ಆವರಿಸಿಕೊಂಡು ಧಗ ಧಗನೆ ಹೊತ್ತಿ ಉರಿದಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ಪಟ್ಟಣದ ಉಪನೋಂದಣಿ ಕಚೇರಿ ಬಳಿ ಈ ಅಗ್ನಿ ಅವಘಡ ಸಂಭವಿಸಿದೆ.
ಹಳಿಯಾಳ ಪಟ್ಟಣದ ಉಪನೋಂದಣಿ ಕಚೇರಿ ಬಳಿ ಇರುವಂತಹ ರವಿ ಝೆರಾಕ್ಸ್ ಸೆಂಟರ್ನಲ್ಲಿ ಕಾಣಿಸಿಕೊಂಡ ಬೆಂಕಿ ಹಬ್ಬಿ ಅಕ್ಕ ಪಕ್ಕದ ಅಂಗಡಿಗಳು ಹಾಗೂ ಮನೆಗೂ ಹಾನಿ ಬೆಂಕಿ ಹಬ್ಬಿದೆ. ಗದಿಗೆಪ್ಪ ಖಾನಾವಳಿ, ಆರ್ಎನ್ಎಸ್ ಎಲೆಕ್ಟ್ರಿಕಲ್ಸ್, ಅಪ್ಪು ಜ್ಯುವೆಲ್ಲರಿ ಹಾಗೂ ಮನೆಯೊಂದಕ್ಕೆ ಬೆಂಕಿ ತಗುಲಿದೆ ಎಂದು ತಿಳಿದುಬಂದಿದೆ.
ಸ್ಥಳಕ್ಕೆ ಅಗ್ನಿ ಶಾಮಕ ದಳ ಹಾಗೂ ಪೊಲೀಸ್ ಇಲಾಖೆ ದೌಡಾಯಿಸಿದ್ದು ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ನಿರಂತರ ಸುರಿಯುತ್ತಿರುವ ಮಳೆಯ ನಡುವೆಯೇ ಬೆಂಕಿ ನಂದಿಸಲು ಅಗ್ನಿಶಾಮಕ ದಳ ಸಿಬ್ಬಂದಿಗಳು ಹರಸಾಹಸ ಪಟ್ಟರು.ದುರ್ಘಟನೆಯಿಂದ ಈವರೆಗೆ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಹಳಿಯಾಳ ಶಹರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.