ತುಮಕೂರು : ತುಮಕೂರಿನಲ್ಲಿ ಬೆಳ್ಳಂಬೆಳಗ್ಗೆ ಅಗ್ನಿ ಅವಘಡ ಸಂಭವಿಸಿದ್ದು ಮಳಿಗೆಗಳು ಹೊತ್ತಿ ಉರಿದಿರುವ ಘಟನೆ ತುಮಕೂರು ನಗರದ ವಿಶ್ವವಿದ್ಯಾಲಯದ ಬಳಿಯ ಮಳಿಗೆಗಳಲ್ಲಿ ಇಂದು ಬೆಳಗಿನ ಜಾವ ಬೆಂಕಿ ಕಾಣಿಸಿಕೊಂಡಿದ್ದು, ಮೊಬೈಲ್ ಅಂಗಡಿ ಸೇರಿದಂತೆ ಮೂರು ಮಳಿಗೆಗಳು ಸುಟ್ಟು ಭಸ್ಮವಾಗಿವೆ.
ಈ ಒಂದು ಘಟನೆ ಶಾರ್ಟ್ ಸರ್ಕ್ಯೂಟ್ ನಿಂದ ಆಗಿದೆ ಎಂದು ಶಂಕೆ ವ್ಯಕ್ತಪಡಿಸಲಾಗಿದ್ದು, ಮೊದಲಿಗೆ ಮೊಬೈಲ್ ಅಂಗಡಿಯಲ್ಲಿ ಕಾಣಿಸಿಕೊಂಡ ಬೆಂಕಿ ಪಕ್ಕದ ಸೌತ್ ಹೋಳಿಗೆ ಮನೆಗೂ ವ್ಯಾಪಿಸಿದೆ. ಆ ನಂತರ ಸಮೀಪದ ಎಸ್‌ಎಂಎಲ್ ತರಕಾರಿ ಅಂಗಡಿಗೂ ಬೆಂಕಿ ಹಬ್ಬಿದೆ.
ಅಗ್ನಿ ಅವಘಡದಲ್ಲಿ ಸಿಸಿ ಕ್ಯಾಮೆರಾ, ಮೊಬೈಲ್, ಫ್ರಿಜ್ ಸೇರಿದಂತೆ ಅಪಾರ ಪ್ರಮಾಣದ ವಸ್ತುಗಳು ನಾಶವಾಗಿವೆ.ಹೊಸ ಬಡಾವಣೆ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದ್ದು, ಈಗಾಗಲೇ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕಾಗಮಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ತಿಳಿದುಬಂದಿದೆ.