ಕೊಪ್ಪಳ : ಕೊಪ್ಪಳದಲ್ಲಿ ಭಾರಿ ಅಗ್ನಿ ಅನಾಹುತ ಸಂಭವಿಸಿದ್ದು ಬಸ್ ನಿಲ್ದಾಣದ ಬಳಿ ಇರುವ ಹಾರ್ಡ್ವೇರ್ ಅಂಗಡಿಯಲ್ಲಿ ಆಕಸ್ಮಿಕ ಅಗ್ನಿ ಸಂಭವಿಸಿದ್ದು ಅಂಗಡಿಯಲ್ಲಿದ್ದ ವಸ್ತುಗಳು ಸ್ಪೋಟಗೊಳ್ಳುತ್ತಿದ್ದು, ಅಪಾರ ಪ್ರಮಾಣದ ವಸ್ತುಗಳು ಸುಟ್ಟು ಭಸ್ಮವಾಗಿರುವ ಘಟನೆ ನಡೆದಿದೆ.
ಹೌದು ಕೊಪ್ಪಳದ ಜನನಿಬಿಡ ಬಸ್ ನಿಲ್ದಾಣದ ಎದುರುಗಡೆ ಹಾರ್ಡ್ವೇರ್ ಶಾಪ್ನಲ್ಲಿ ಅಗ್ನಿ ಅನಾಹುತ ಸಂಭವಿಸಿದೆ. ಈ ಒಂದು ಅಗ್ನಿ ಅವಘಡದಿಂದ ಪಕ್ಕದಲ್ಲಿರುವ ಒಂದರಿಂದ ಮತ್ತೊಂದು ಅಂಗಡಿಗೆ ಬೆಂಕಿಯ ಜ್ವಾಲೆ ವ್ಯಾಪಿಸಿದೆ. ಸುಮಾರು ನಾಲ್ಕರಿಂದ ಐದು ಅಂಗಡಿಗಳು ಕೂಡ ಈ ಒಂದು ಅವಘಡದಲ್ಲಿ ಬೆಂಕಿಗೆ ಆಹುತಿಯಾಗುವೆ.
ಈ ಘಟನೆಯಲ್ಲಿ ಅಂಗಡಿಯಲ್ಲಿರುವಂತಹ ಅನೇಕ ವಸ್ತುಗಳು ಸ್ಪೋಟಗೊಳ್ಳುತ್ತಿದ್ದು ಸದ್ಯ ಜನರು ಭಯಭರಿತರಾಗಿದ್ದಾರೆ. ಘಟನ ಸ್ಥಳಕ್ಕೆ ತಕ್ಷಣ ಅಗ್ನಿಶಾಮಕ ದಳ ಸಿಬ್ಬಂದಿ ಆಗಮಿಸಿ ಬೆಂಕಿನಂದಿಸಲು ಹರಸಾಹಸ ಪಡುತ್ತಿದ್ದಾರೆ ಎಂದು ತಿಳಿದುಬಂದಿದೆ. ಇದೆ ವೇಳೆ ಸ್ಥಳಕ್ಕೆ ಆಗಮಿಸಿದ ಕೊಪ್ಪಳದ ಎಸ್ ಪಿ ಅವರು ಜನರು ಘಟನೆ ಸ್ಥಳಕ್ಕೆ ಜನರು ಹೋಗದಂತೆ ತಡೆದು ಕ್ರಮ ಕೈಗೊಂಡಿದ್ದಾರೆ.