ಬೆಳಗಾವಿ : ಬೆಳಗಾವಿಯ ಖಡೆ ಬಜಾರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವಂತಹ ಹಳೆ ಪಾಲಿಕೆ ಕಚೇರಿಯಲ್ಲಿ ಇಂದು ಭೀಕರವಾದ ಅಗ್ನಿ ಅವಘಡ ಸಂಭವಿಸಿದೆ. ಈ ಒಂದು ಅಗ್ನಿ ದುರಂತದಲ್ಲಿ ಕಚೇರಿ ದಾಖಲೆ ಕೊಠಡಿಯಲ್ಲಿ ಇದ್ದಂತಹ ಕೆಲವು ಮಹತ್ವದ ದಾಖಲೆಗಳು ಸುಟ್ಟು ಕರಕಲಾಗಿರುವ ಮಾಹಿತಿ ಒದಗಿ ಬಂದಿದೆ.
ಹೌದು ಹಳೆ ಪಾಲಿಕೆ ಕಚೇರಿಯಲ್ಲಿ ದಾಖಲಾತಿ ಕೊಠಡಿಯಲ್ಲಿ ಬೆಂಕಿ ಅವಘಡ ಸಂಭವಿಸಿದೆ. ಬೆಳಗಾವಿಯ ಖಡೆ ಬಜಾರ್ ನಲ್ಲಿರುವ ಹಳೆಯ ಪಾಲಿಗೆ ಕಚೇರಿಯಲ್ಲಿ ಬೆಂಕಿ ಹೊತ್ತಿ ಉರಿದಿದೆ. ಕೊಠಡಿಯಲ್ಲಿದ್ದ ಮಹತ್ವದ ದಾಖಲೆಗಳು ಸುಟ್ಟು ಕರಕಲಾಗಿವೆ.ಕೂಡಲೇ ಘಟನಾ ಸ್ಥಳಕ್ಕೆ ಆಗಮಿಸಿ ಅಗ್ನಿಶಾಮಕ ದಳ ಸಿಬ್ಬಂದಿಗಳು ಬೆಂಕಿಯನ್ನು ನಂದಿಸಿದ್ದಾರೆ. ಸಿಗರೇಟ್ ಸೇದಿ ಕೊಠಡಿಗೆ ಎಸೆದು ಹೋಗಿರುವ ಶಂಕೆ ಇದೀಗ ವ್ಯಕ್ತವಾಗಿದೆ.ಘಟನೆ ಕುರಿತಂತೆ ಖಡೆ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.