ಹೊಸದಿಲ್ಲಿ: ದೆಹಲಿಯ ಚಾಂದಿನಿ ಚೌಕ್‌ನ ಪ್ರಸಿದ್ಧ ದರಿಬಾ ಬಜಾರ್ ಪ್ರದೇಶದ ವ್ಯಾಪ್ತಿಯಲ್ಲಿರುವ ಕಟ್ಟಡದಲ್ಲಿ ಭಾನುವಾರ ಭಾರೀ ಬೆಂಕಿ ಕಾಣಿಸಿಕೊಂಡಿದೆ. ಸಾಮಾಜಿಕ ಜಾಲತಾಣಗಳಲ್ಲಿ ಬೆಂಕಿ ಅವಘಡದ ದೃಶ್ಯಗಳು ಹರಿದಾಡುತ್ತಿದ್ದೂ, ಬೆಂಕಿ ಹೊತ್ತಿಕೊಳ್ಳಲು ಏನು ಕಾರಣ ಎಂಬುದರ ಕುರಿತು ತನಿಖೆಯ ನಡೆಯುತ್ತಿದೆ. ಘಟನಾ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸುವ ಕಾರ್ಯವನ್ನು ಮುಂದುವರೆಸಿದ್ದಾರೆ.
ಮಧ್ಯಾಹ್ನ 1.08ಕ್ಕೆ ಬೆಂಕಿಯ ಬಗ್ಗೆ ನಮಗೆ ಕರೆ ಬಂದಿತ್ತು. ನಾಲ್ಕು ಅಗ್ನಿಶಾಮಕ ಟೆಂಡರ್‌ಗಳನ್ನು ಸೇವೆಗೆ ಒತ್ತಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮತ್ತು ಯಾವುದೇ ಸಾವುನೋವುಗಳ ವರದಿಗಳಿಲ್ಲ ಎಂದು ಹೇಳಿದರು. ಇನ್ನೆರಡು ಅಗ್ನಿಶಾಮಕ ವಾಹನಗಳನ್ನು ಸ್ಥಳಕ್ಕೆ ಕಳುಹಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Watch: A massive fire broke out in a building in Dariba Bazaar of Chandni Chowk. pic.twitter.com/EZfw2VDp6M
— IANS (@ians_india) May 12, 2024