ಬೆಂಗಳೂರು : RTO ಇಲಾಖೆಯಲ್ಲಿ ಅಧಿಕಾರಿಗಳ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿದ್ದು ತಪಾಸಣೆ ಮಾಡದೇ ಸಾವಿರಾರು ವಾಹನಗಳಿಗೆ ಫಿಟ್ನೆಸ್ ಸರ್ಟಿಫಿಕೇಟ್ (FC) ಕೊಡಲಾಗಿದೆ ಎನ್ನುವ ಗಂಭೀರವಾದ ಆರೋಪ ಕೇಳಿ ಬಂದಿದೆ. ಬೆಂಗಳೂರ್ ನಗರ ಬೆಂಗಳೂರು ಕೇಂದ್ರ ಸೇರಿದಂತೆ ಕೋರಮಂಗಲ ಆರ್ ಟಿ ಓ ಕಚೇರಿಯಲ್ಲಿ ವೆಹಿಕಲ್ ಇನ್ಸ್ಪೆಕ್ಟರ್ ರಿಂದ ಫಿಟ್ನೆಸ್ ಸರ್ಟಿಫಿಕೇಟ್ ನೀಡಿದ್ದಾರೆ.
ದಾಖಲೆ ಸಮೇತ ವಕೀಲ ನಟರಾಜ್ ಎಂಬವರು ಇದೀಗ ಆರ್‌ಟಿಓ ಅಧಿಕಾರಿಗಳ ವಿರುದ್ಧ ದೂರು ನೀಡಿದ್ದಾರೆ. ಹೊರ ರಾಜ್ಯದ ಒಟ್ಟು 10,000 22 ವಾಹನಗಳಿಗೆ ಫಿಟ್ನೆಸ್ ಸರ್ಟಿಫಿಕೇಟ್ ಕೊಡಲಾಗಿದೆ ತಪಾಸಣೆ ಮಾಡದೇ ಅಧಿಕಾರಿಗಳು ಫಿಟ್ನೆಸ್ ಸರ್ಟಿಫಿಕೇಟ್ ಮಾಡಿ ಕೊಟ್ಟಿದ್ದಾರೆ. ಮಹಾರಾಷ್ಟ್ರ ಕೇರಳ ಗುಜರಾತ್ ವಾಹನಗಳಿಗೆ ಫಿಟ್ನೆಸ್ ಸರ್ಟಿಫಿಕೇಟ್ ನೀಡಿದ್ದಾರೆ ಎಂದು ವಕೀಲ ನಟರಾಜ್ ಅವರು ಆರೋಪಿಸಿದ್ದಾರೆ.
ಬೆಂಗಳೂರು ನಗರ ಬೆಂಗಳೂರು ಸೆಂಟ್ರಲ್ ಸೇರಿದಂತೆ ಆರ್ ಟಿ ಓ ಇಲಾಖೆಯಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಅಧಿಕಾರಿಗಳು ತಮಗೆ ಮನಸ್ಸು ಇಚ್ಛೆ ಸುಮಾರು 10000ಕ್ಕೂ ಹೆಚ್ಚು ವಾಹನಗಳಿಗೆ ತಪಾಸಣೆ ಮಾಡದೇ ಫಿಟ್ನೆಸ್ ಸರ್ಟಿಫಿಕೇಟ್ ಕೊಟ್ಟಿದ್ದಾರೆ. ಇದರಲ್ಲಿ ಸುಮಾರು ನಾಲ್ಕು ಅಧಿಕಾರಿಗಳು ಇದರಲ್ಲಿ ಭಾಗಿಯಾಗಿದ್ದಾರೆ ಎಂದು ವಕೀಲ ನಟರಾಜ ದಾಖಲೆ ಸಮೇತ ಆರೋಪ ಮಾಡಿದ್ದಾರೆ.
ಕೋರಮಂಗಲದ ಆರ್ ಟಿ ಓ ಅಧಿಕಾರಿ ಸೇರಿದಂತೆ ಒಟ್ಟು ನಾಲ್ವರು ಮೋಟಾರ್ ವೆಹಿಕಲ್ ಇನ್ಸ್ಪೆಕ್ಟರ್ಗಳು ಅಕ್ರಮದಲ್ಲಿ ಭಾಗಿಯಾಗಿದ್ದಾರೆ. ಕಳೆದ ಆರು ತಿಂಗಳಲ್ಲಿ ಸಾವಿರಾರು ವಾಹನಗಳಿಗೆ ಅನಧಿಕೃತವಾಗಿ ಎಫ್ ಸಿ ನೀಡಿದ್ದಾರೆ. ಯಾವುದೇ ರಾಜ್ಯದಲ್ಲಿ ಎಫ್ ಸಿ ಮಾಡಿಸಬಹುದು ಆದರೆ ವಾಹನಗಳಲ್ಲಿ ಅಧಿಕಾರಿಗಳು ಖುದ್ದಾಗಿ ತಪಾಸಣೆ ನಡೆಸಬೇಕು ಅಧಿಕಾರಿಗಳು ಹಣದ ಆಸೆಗೆ ತಪಾಸಣೆ ಮಾಡದೇ ಎಫ್‌ಸಿ ನೀಡಿದ್ದಾರೆ. ಬೇರೆ ರಾಜ್ಯಗಳ ವಾಹನಗಳಿಗೆ ಸಾರಿಗೆ ಅಧಿಕಾರಿಗಳು ಎಫ್ ಸಿ ನೀಡಿದ್ದಾರೆ ಅಕ್ರಮದ ಬಗ್ಗೆ ತನಿಖೆ ನಡೆಸುವಂತೆ ದಾಖಲೆ ಸಮೇತ ಆಯುಕ್ತರಿಗೆ ದೂರು ನೀಡಿದ್ದಾರೆ ಸಾರಿಗೆ ಇಲಾಖೆ ಆಯುಕ್ತರಿಗೆ ವಕೀಲ ನಟರಾಜ್ ಶರ್ಮಾ ದೂರು ನೀಡಿದ್ದಾರೆ.








