ಬೆಂಗಳೂರು: ರಾಜ್ಯದ ಎಸ್‌ಎಸ್‌ಎಲ್‌ಸಿ (SSLC) ವಿದ್ಯಾರ್ಥಿಗಳಿಗೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ಇಂದು ಅತ್ಯಂತ ಮಹತ್ವದ ತೀರ್ಪೊಂದನ್ನು ನೀಡಿದೆ. ಇನ್ಮುಂದೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹಿಂದಿ ಭಾಷೆಗೆ ಕೇವಲ ‘ಗ್ರೇಡ್’ ನೀಡುವ ಬದಲಾಗಿ, ಇತರ ವಿಷಯಗಳಂತೆ ಅಂಕಗಳನ್ನು (Marks) ನೀಡಬೇಕು ಎಂದು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ.
ಎಸ್ ಎಸ್ ಎಲ್ ಸಿ ಯಲ್ಲಿ ಹಿಂದಿ ಭಾಷೆಗೆ ಗ್ರೇಡ್ ಬದಲು ಅಂಕ ನೀಡುವಂತೆ ಈ ಹಿಂದೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಆದೇಶ ನೀಡಿತ್ತು. ಇದನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಹೈಕೋರ್ಟಕ್ಕೆ ಮರುಪರಿಶೀಲನ ಅರ್ಜಿ ಸಲ್ಲಿಸಿತ್ತು. ಇದೀಗ ಹೈಕೋರ್ಟ್ ಮರುಪರಿಶೀಲನ ಅರ್ಜಿಯನ್ನು ವಜಾಗೊಳಿಸಿ ಹಿಂದಿ ಭಾಷೆಗೆ ಗ್ರೇಡ್ ಬದಲು ಅಂಕಗಳನ್ನು ನೀಡಿ ಎಂದು ಮಹತ್ವದ ಆದೇಶ ಹೊರಡಿಸಿದೆ.
ನ್ಯಾಯಮೂರ್ತಿ ಇ.ಎಸ್ ಇಂದಿರೇಶ್ ಅವರಿದ್ದ ಹೈಕೋರ್ಟ್ ಪೀಠ ಈ ಒಂದು ಆದೇಶ ಹೊರಡಿಸಿದೆ. ಪ್ರಸಕ್ತ ಸಾಲಿಗೆ ಹಿಂದಿ ಭಾಷೆಗೆ ಗ್ರೇಡ್ ಬದಲು ಅಂಕ ನೀಡಿ ಎಂದು ಆದೇಶ ಹೊರಡಿಸಿದ್ದು, ಸರ್ಕಾರದ ಪರವಾಗಿ ಅಡ್ವೋಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ವಾದ ಮಂಡಿಸಿದರು. ಹೈಕೋರ್ಟ್ ವಿಭಾಗಿಯ ಪೀಠದಲ್ಲಿ ಪಿಐಎಲ್ ಮಜಾ ಗೊಂಡಿದೆ ಹಿಂದಿ ಭಾಷೆಯಲ್ಲಿ ಲಕ್ಷಕ್ಕೂ ಹೆಚ್ಚು ಮಂದಿ ಅನುತ್ತಿರ್ನಗೊಂಡಿದ್ದರು. ಹೀಗಾಗಿ ವಿದ್ಯಾರ್ಥಿಗಳ ಮೇಲೆ ಒತ್ತಡ ಕಡಿಮೆ ಮಾಡಲು ಈ ಕ್ರಮ ಕೈಗೊಳ್ಳಲಾಗಿದೆ. ಸೂಕ್ತ ತಿದ್ದುಪಡಿ ಯೊಂದಿಗೆ ನಿಮ್ಮ ರಚಿಸಲು ಸರ್ಕಾರ ಕರಡು ರೂಪಿಸುತ್ತಿದೆ ಅಂಕದ ಬದಲು ಗ್ರೇಡ್ ನೀಡಲಾಗುತ್ತಿದೆ ಎಂದು ಎಜಿ ಶಶಿಕರಣ್ ಶೆಟ್ಟಿ ವಾದ ಮಂಡಿಸಿದರು.
ಬಳಿಕ ನ್ಯಾಯಮೂರ್ತಿ ಎಸ್ ಇಂದಿರೇಶ ಅವರಿದ್ದ ಹೈಕೋರ್ಟ್ ಪೀಠ ಸರ್ಕಾರಕ್ಕೆ ಪ್ರಶ್ನಿಸಿದ್ದು, ಎಸ್ ಎಸ್ ಎಲ್ ಸಿ ಪರೀಕ್ಷೆ ಆದಿ ಸೂಚನೆ ಹೊರಡಿಸಿದಾಗಲೇ ಇದನ್ನು ಸ್ಪಷ್ಟಪಡಿಸಬೇಕಿತ್ತು. ಅಧಿಸೂಚನೆಯಲ್ಲಿ ಇಲ್ಲದ ಗ್ರೇಡ್ ಪದ್ದತಿ ಈಗ ಅನುಷ್ಠಾನಗೊಳಿಸುತ್ತಿದ್ದೀರಿ ಪಿಯುಸಿಯಲ್ಲಿ ಈಗ 83 ಪ್ರತಿಶತ ವಿದ್ಯಾರ್ಥಿಗಳು ಉತ್ತೀರ್ಣರಾಗುತ್ತಿದ್ದಾರೆ ನೀವು ಅದನ್ನು ಪಾಸ್ ಮಾಡಬೇಕೆಂದಿದ್ದರೆ ಪರೀಕ್ಷೆಯನ್ನೇ ರದ್ದು ಮಾಡಿ. ನಿಯಮ ರೂಪಿಸಿದ ಬಳಿಕ ಸರ್ಕಾರ ಸೂಕ್ತವನಿಸಿದ ಕ್ರಮ ತೆಗೆದುಕೊಳ್ಳಬಹುದು. ನಿಯಮ ರೂಪಿಸುವ ಮುಂಚಿನ ಪರಿಚಯ ಅಂಕ ಪದ್ಧತಿ ಬದಲಾವಣೆ ಸೂಕ್ತವಲ್ಲ 2025 26ನೇ ಸಾಲಿನ ಹಿಂದಿ ಭಾಷೆಗೆ ಅಂಕ ನೀಡಲು ಹೈಕೋರ್ಟ್ ಆದೇಶ ಹೊರಡಿಸಿದೆ.
ಪ್ರಕರಣದ ಹಿನ್ನೆಲೆ ಮತ್ತು ಆದೇಶ
ಹೈಕೋರ್ಟ್‌ನ ಈ ನಿರ್ಧಾರವು ಮುಖ್ಯವಾಗಿ ಹಿಂದಿ ಭಾಷೆಯ ಪರೀಕ್ಷೆಯಲ್ಲಿನ ಪ್ರಶ್ನೆಗಳ ಗೊಂದಲ ಅಥವಾ ತಪ್ಪುಗಳಿಗೆ ಸಂಬಂಧಿಸಿದ್ದಾಗಿದೆ. ಈ ಕುರಿತು ಕೆಲವು ಪ್ರಮುಖ ಅಂಶಗಳು ಇಲ್ಲಿವೆ:
ಗೈಡ್ ಬದಲು ಅಂಕ (Grace Marks): ಪರೀಕ್ಷೆಯಲ್ಲಿ ಕೇಳಲಾದ ಕೆಲವು ಪ್ರಶ್ನೆಗಳು ಪಠ್ಯಕ್ರಮಕ್ಕೆ ಹೊರತಾಗಿದ್ದವು ಅಥವಾ ತಾಂತ್ರಿಕ ದೋಷಗಳನ್ನು ಹೊಂದಿದ್ದವು ಎಂಬ ಹಿನ್ನೆಲೆಯಲ್ಲಿ, ಆ ಪ್ರಶ್ನೆಗಳಿಗೆ ಹಾಜರಾದ (Attempt ಮಾಡಿದ) ವಿದ್ಯಾರ್ಥಿಗಳಿಗೆ ಕೃಪಾಂಕ ನೀಡುವಂತೆ ಕೋರ್ಟ್ ಈ ಹಿಂದೆ ಸೂಚಿಸಿತ್ತು.
ಸರ್ಕಾರದ ಮರುಪರಿಶೀಲನಾ ಅರ್ಜಿ ವಜಾ: ಹೈಕೋರ್ಟ್‌ನ ಈ ಆದೇಶವನ್ನು ಪ್ರಶ್ನಿಸಿ ರಾಜ್ಯ ಸರ್ಕಾರವು ‘ಮರುಪರಿಶೀಲನಾ ಅರ್ಜಿ’ ಸಲ್ಲಿಸಿತ್ತು. ಆದರೆ, ಈ ಅರ್ಜಿಯಲ್ಲಿ ಸೂಕ್ತ ಆಧಾರಗಳಿಲ್ಲ ಎಂದು ಅಭಿಪ್ರಾಯಪಟ್ಟ ಹೈಕೋರ್ಟ್, ಅದನ್ನು ಈಗ ವಜಾಗೊಳಿಸಿದೆ.
ವಿದ್ಯಾರ್ಥಿಗಳಿಗೆ ಅನುಕೂಲ: ಈ ಆದೇಶದಿಂದಾಗಿ ಅಂಕಗಳ ಕೊರತೆಯಿಂದ ಕಷ್ಟಪಡುತ್ತಿದ್ದ ಅಥವಾ ಪರೀಕ್ಷೆಯಲ್ಲಿನ ದೋಷದಿಂದ ಅಂಕ ಕಳೆದುಕೊಂಡಿದ್ದ ಸಾವಿರಾರು ವಿದ್ಯಾರ್ಥಿಗಳಿಗೆ ದೊಡ್ಡ ಮಟ್ಟದ ಸಮಾಧಾನ ಸಿಗಲಿದೆ.








