ಕೆಎನ್ಎನ್‍ಡಿಜಿಟಲ್ ಡೆಸ್ಕ್ : ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಭಾರತದ ಮನು ಭಾಕರ್ 25 ಮೀಟರ್ ಪಿಸ್ತೂಲ್ ವಿಭಾಗದಲ್ಲಿ ಫೈನಲ್ ಪ್ರವೇಶಿಸಿದ್ದಾರೆ. ಈ ಮೂಲಕ ಮೂರನೇ ಪದಕದ ಮೇಲೆ ಕಣ್ಣಿಟ್ಟಿದ್ದಾರೆ.
Indian shooter Manu Bhaker has qualified for the finals of Women's 25m Pistol. She finished 2nd in the qualification round. pic.twitter.com/w1bNY63LuE
— ANI (@ANI) August 2, 2024
ಅಂದ್ಹಾಗೆ, ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಮನು ಭಾಕರ್ ಅದ್ಭುತ ಸಾಧನೆ ಮಾಡಿದ್ದಾರೆ. ಎರಡು ಕಂಚಿನ ಪದಕ ಗೆದ್ದಿರುವ ಈ ಶೂಟರ್ ಇದೀಗ ಮೂರನೇ ಪದಕದ ಸನಿಹಕ್ಕೆ ಬಂದಿದ್ದಾರೆ. ಶುಕ್ರವಾರ ನಡೆದ 25 ಮೀಟರ್ ಪಿಸ್ತೂಲ್ ಸ್ಪರ್ಧೆಯ ಅರ್ಹತಾ ಸುತ್ತಿನಲ್ಲಿ ಮನು ಭಾಕರ್ ಅದ್ಭುತ ಪ್ರದರ್ಶನ ನೀಡಿ ಫೈನಲ್ ಪ್ರವೇಶಿಸಿದರು. ಮನು ಭಾಕರ್ ಅರ್ಹತಾ ಸುತ್ತಿನಲ್ಲಿ ಎರಡನೇ ಸ್ಥಾನ ಪಡೆದರು. ಅರ್ಹತಾ ಸುತ್ತಿನಲ್ಲಿ ಮನು ಭಾಕರ್ 590-24x ಗಳಿಸಿದರು, ಆದರೆ ಭಾರತದ ಇತರ ಶೂಟರ್ ಇಶಾ ಸಿಂಗ್ ಫೈನಲ್‌ಗೆ ತಲುಪಲು ವಿಫಲರಾದರು. ಇಶಾ ಸಿಂಗ್ 18ನೇ ಸ್ಥಾನದಲ್ಲಿದ್ದಾರೆ. ಅಗ್ರ 8 ಶೂಟರ್’ಗಳು ಮಾತ್ರ ಫೈನಲ್‌ಗೆ ಪ್ರವೇಶಿಸಲು ಸಮರ್ಥರಾಗಿದ್ದಾರೆ ಮತ್ತು ಮನು ಭಾಕರ್ ಅರ್ಹತೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಮನು ಭಾಕರ್ 25 ಮೀಟರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಪದಕ ಗೆದ್ದರೆ ಇತಿಹಾಸ ಸೃಷ್ಟಿಸಲಿದ್ದಾರೆ. ಹಿಂದೆಂದೂ ಯಾವುದೇ ಭಾರತೀಯರು ಒಲಿಂಪಿಕ್ಸ್’ನಲ್ಲಿ ಸತತ ಮೂರು ಪದಕಗಳನ್ನ ಗೆದ್ದಿಲ್ಲ ಮತ್ತು ಮನು ಈ ಸಾಧನೆ ಮಾಡುವ ಅವಕಾಶವನ್ನ ಹೊಂದಿದ್ದಾರೆ. ಮನು ಭಾಕರ್ ಮೂರನೇ ಪದಕವನ್ನ ಗೆದ್ದರೆ, ಅವರು ತಮ್ಮ ಹೆಸರಿನಲ್ಲಿ ಮೂರು ಒಲಿಂಪಿಕ್ ಪದಕಗಳನ್ನ ಹೊಂದಿರುವ ಭಾರತದ ಇತಿಹಾಸದಲ್ಲಿ ಮೊದಲ ಆಟಗಾರ್ತಿಯಾಗುತ್ತಾರೆ. ಸದ್ಯ ಸುಶೀಲ್ ಕುಮಾರ್ ಅವರು ಪಿವಿ ಸಿಂಧು ಅವರಂತೆ 2 ಒಲಿಂಪಿಕ್ಸ್ ಪದಕಗಳನ್ನ ಗೆದ್ದಿದ್ದಾರೆ. ಮನು ಉತ್ಸಹ ನೋಡುತ್ತಿದ್ದರೆ ಈ ಕಾರ್ಯ ಸಾಧ್ಯ ಎನ್ನಿಸೋದಿರೋದಿಲ್ಲ.
BREAKING : ದೆಹಲಿ ಕೋಚಿಂಗ್ ಸೆಂಟರ್’ನಲ್ಲಿ ಸಾವು ಪ್ರಕರಣ ; ‘CBI ತನಿಖೆ’ಗೆ ಹೈಕೋರ್ಟ್ ಆದೇಶ
ಹೇ ವಿಜಯೇಂದ್ರ ನಿನಗೆ ಧೈರ್ಯ, ತಾಕತ್ತಿದ್ದರೆ ಪಾದಯಾತ್ರೆಗೆ ಯಾವ ಕಾಂಗ್ರೆಸಿಗ ಕುಮ್ಮಕ್ಕು ಕೊಟ್ಟಿದ್ದಾನೆ ಹೇಳು: DKS
‘BCCI’ಗೆ 158 ಕೋಟಿ ಬಾಕಿ ಪಾವತಿಗೆ ‘ಬೈಜುಸ್’ ಒಪ್ಪಿಗೆ ; ಸಂಘರ್ಷ ಇತ್ಯರ್ಥಕ್ಕೆ ‘NCLAT’ ಅನುಮೋದನೆ