ನವದೆಹಲಿ : ತಿಂಗಳುಗಟ್ಟಲೆ ಜನಾಂಗೀಯ ಹಿಂಸಾಚಾರದ ನಂತರವೂ ಸಹಜ ಸ್ಥಿತಿಗೆ ಬರಲು ಹೆಣಗಾಡುತ್ತಿರುವ ಈಶಾನ್ಯ ರಾಜ್ಯಕ್ಕೆ ಮಣಿಪುರದಿಂದ ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆ 2.0 ಜನವರಿ 14 ರಂದು ಆರಂಭವಾಗಬೇಕಿತ್ತು. ಆದರೆ ಕಾಂಗ್ರೆಸ್ ಯಾತ್ರೆಗೆ ಅನುಮತಿ ಕೊರಿ ಸಲ್ಲಿಸಿದ್ದ ಅರ್ಜಿಯನ್ನು ಇದೀಗ ಮಣಿಪುರ ಹಾಗೂ ಅಸ್ಸಾಂ ಸರ್ಕಾರ್ ನಿರಾಕರಿಸಿದೆ ಎಂದು ತಿಳಿದುಬಂದಿದೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ಇದೆ ಜನವರಿ 14 ರಿಂದ ಭಾರತ ಜೋಡೋ ನ್ಯಾಯ ಯಾತ್ರೆಗೆ ಅರ್ಜಿಯನ್ನು ಸಲ್ಲಿಸಲಾಗಿತ್ತು. ಆದರೆ ಯಾತ್ರೆ ನಡೆಸಲು ಮಣಿಪುರ ಅಸ್ಸಾಂನಲ್ಲಿ ರಾಹುಲ್ ಯಾತ್ರೆಗೆ ಅನುಮತಿ ನಿರಾಕರಿಸಲಾಗಿದೆ.ಈ ಕುರಿತಂತೆ ಕಳೆದ ವಾರವೇ ಕಾಂಗ್ರೆಸ್ ಯಾತ್ರೆಯ ಅನುಮತಿ ಕೋರಿ ಅರ್ಜಿ ಸಲ್ಲಿಸಿತ್ತು.
ಆದರೆ ಯಾತ್ರೆಗೆ ಮಣಿಪುರ ಸರ್ಕಾರ ಇನ್ನು ಅನುಮತಿ ನೀಡಿಲ್ಲ ಅಸ್ಸಾಂ ಸರ್ಕಾರ ಕೂಡ ರಾಹುಲ್ ಯಾತ್ರೆಗೆ ಅನುಮತಿ ನೀಡಿಲ್ಲ ಅನುಮತಿ ವಿಚಾರವನ್ನು ಕೇಂದ್ರಕ್ಕೆ ಕಳುಸಿದ್ದೇವೆ ಎಂದು ಮಣಿಪುರ ಸರ್ಕಾರ ತಿಳಿಸಿದ್ದು ಈ ಬಗ್ಗೆ ಕಾಂಗ್ರೆಸ್ ಗೆ ಮಣಿಪುರ್ ಮತ್ತು ಅಸಂಸರಕಾರ ಮಾಹಿತಿ ನೀಡಿವೆ ಎಂದು ಹೇಳಲಾಗುತ್ತಿದೆ.
66 ದಿನಗಳ 6,700-ಕಿಮೀ ಕ್ರಮಿಸಲಿರುವ ಭಾರತ್ ಜೋಡೋ ನ್ಯಾಯ್ ಯಾತ್ರೆ ಎಂಬ ಹೆಸರಿನ ಈ ಯಾತ್ರೆ ಮಹಾತ್ಮ ಗಾಂಧಿಯವರ ಜನ್ಮಸ್ಥಳವಾದ ಗುಜರಾತ್ನ ಪೋರಬಂದರ್ನಲ್ಲಿ ಮುಕ್ತಾಯಗೊಳ್ಳಲಿದೆ.ಇದು 15 ರಾಜ್ಯಗಳು ಮತ್ತು 100 ಕ್ಕೂ ಹೆಚ್ಚು ಲೋಕಸಭಾ ಕ್ಷೇತ್ರಗಳಲ್ಲಿ ಸಂಚರಿಸಲಿದೆ. ಪಕ್ಷವು ಆರಂಭದಲ್ಲಿ ಅರುಣಾಚಲ ಪ್ರದೇಶದಿಂದ ಯಾತ್ರೆಯನ್ನು ಪ್ರಾರಂಭಿಸಲು ಯೋಜಿಸಿತ್ತು.
ಆರಂಭದಂತೆಯೇ, ಎರಡನೇ ಹಂತದ ಮೆರವಣಿಗೆಯ ಹೆಸರನ್ನು ಬದಲಾಯಿಸಲಾಯಿತು. ಕಳೆದ ವರ್ಷದ ಭಾರತ್ ಜೋಡೋ ಯಾತ್ರೆಯಿಂದ ಉಂಟಾದ ಪರಿಣಾಮವನ್ನು ಮರುಸೃಷ್ಟಿಸಲು “ಜೋಡೋ” ಪದವನ್ನು ಸೇರಿಸಲು ನಿರ್ಧರಿಸಿದ್ದೇವೆ ಎಂದು ಹಿರಿಯ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಹೇಳಿದ್ದಾರೆ.