ಬೆಂಗಳೂರು : ಬೀಚ್ ಪ್ರವಾಸಕ್ಕೆ ಬಂದಿದ್ದ ಮೂವರು ಸಮುದ್ರ ಪಾಲಾಗಿ ಸಾವನ್ನಪ್ಪಿರುವ ಘಟನೆ ಮಂಗಳೂರಿನ ಸೂರತ್ಕಲ್ ನಲ್ಲಿ ನಡೆದಿದೆ. ಮಂಗಳೂರು ಜಿಲ್ಲೆಯ ಸೂರತ್ಕಲ್ ಬಳಿ ಕುಳಾಯಿ ಬಳಿಯ ಹೊಸಬೆಟ್ಟು ಬೀಚ್ ಬಳಿ ಘಟನೆ ನಡೆದಿದೆ. ಸಮುದ್ರದಲ್ಲಿ ಮುಳುಗಿ ಮೂವರು ಪ್ರವಾಸಿಗರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಮೃತರನ್ನು ಚಿತ್ರದುರ್ಗದ ಮಂಜುನಾಥ್ ಶಿವಮೊಗ್ಗದ ಶಿವಕುಮಾರ್ ಹಾಗೂ ಬೆಂಗಳೂರಿನ ಸತ್ಯವೇಲು ಸಮುದ್ರದ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಶಿವಕುಮಾರ್ ಹಾಗೂ ಸತ್ಯವೇಲು ಮೃತದೇಹ ಪಾತೆಯಾಗಿದ್ದು, ಇನ್ನೂ ಮಂಜುನಾಥ ದೇಹಕ್ಕಾಗಿ ತೀವ್ರ ಶೋಧ ನೆಡಿಸಲಾಗುತ್ತಿದೆ.
ಘಟನೆಯಲ್ಲಿ ಇನ್ನೊರ್ವ ವ್ಯಕ್ತಿ ಬೀದರ್ ಪರಮೇಶ್ವರ್ ನನ್ನು ಸ್ಥಳೀಯ ಮೀನುಗಾರರು ರಕ್ಷಿಸಿದ್ದಾರೆ. ಬೆಂಗಳೂರಿನಿಂದ ನಿನ್ನೆ ನಾಲ್ವರು ಪ್ರವಾಸಕ್ಕೆ ಬಂದಿದ್ದರು. ಘಟನೆ ಕುರಿತು ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದು ಪ್ರಕರಣ ನಡೆದಿದೆ.