ಹಾಸನ : ಪತಿ ಪತ್ನಿಯ ಶೀಲ ಶಂಕಿಸುವುದು ಅಷ್ಟೆ ಅಲ್ಲದೇ, ಕೌಟುಂಬಿಕ ಕಲಹದಿಂದ ಮನನೊಂದ ಪತ್ನಿ ಡೆತ್ ನೋಟ್ ಬರೆದಿಟ್ಟು ನೇಣಿಗೆ ಶರಣಾದ ಘಟನೆ ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಲಿಂಗಾಪುರ ಗ್ರಾಮದಲ್ಲಿ ನಡೆದಿದೆ. ಆತ್ಮಹತ್ಯೆಗೆ ಶರಣಾದ ಗೃಹಿಣಿಯನ್ನು ಹರಿಣಾಕ್ಷಿ ಎಂದು ತಿಳಿದುಬಂದಿದೆ.
ಬೇಲೂರು ತಾಲೂಕಿನ ಅರೇಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಲಿಂಗಾಪುರ ಗ್ರಾಮದ ಶೇಖರ್ ಎಂಬುವವರು ಕಳೆದ 16 ವರ್ಷಗಳ ಹಿಂದೆ ಸಕಲೇಶಪುರ ತಾಲೂಕಿನ ಮಾಗಲು ಗ್ರಾಮದ ಹರಿಣಾಕ್ಷಿಯವರನ್ನು ಮದುವೆಯಾಗಿದ್ದರು. ಈ ನಡುವೆ ಇಬ್ಬರ ಮಧ್ಯೆ ಸಣ್ಣ ಪುಟ್ಟ ವಿಚಾರಕ್ಕೆ ಜಗಳ ಆಗುತ್ತಿತ್ತು ಈ ವೇಳೆ ಕುಟುಂಬಸ್ಥರ ಸಮ್ಮುಖದಲ್ಲಿ ರಾಜಿ ಸಂಧಾನ ಮಾಡುತ್ತಿದ್ದವು ಎಂದು ಮೃತಳ ತಂದೆ ತಿಳಿಸಿದ್ದಾರೆ.
ಆದರೆ ಇತ್ತೀಚೆಗೆ ನನ್ನ ಮಗಳ ಮೇಲೆ ಅನೈತಿಕ ಸಂಬಂಧದ ಸಂಶಯ ಪಟ್ಟು ನಾನು ಬೇರೆ ವಿವಾಹವಾಗುತ್ತೇನೆ ನೀನು ಸಹ ಬೇರೆ ಆಗು ಎಂದು ಇಲ್ಲ ಸಲ್ಲದ ಆರೋಪಗಳನ್ನು ಮಾಡುತ್ತ ವಿಚ್ಛೇದನ ಕೊಡುವಂತೆ ಪೀಡಿಸುತ್ತಿದ್ದ. ಅಲ್ಲದೆ ಅವನು ಬೇರೆ ಮಹಿಳೆಯೊಂದಿಗೆ ಹಾರ್ಥಿಕ ಸಂಬಂಧ ಹೊಂದಿದ್ದಾನೆ ಎಂದು ಸ್ಥಳೀಯರು ಅನುಮಾನ ವ್ಯಕ್ತಪಡಿಸಿದ್ದಾರೆ.ಅರೇಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಈ ಸಂಬಂಧ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.