ಶಿವಮೊಗ್ಗ : ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪತಿ ಪತ್ನಿಯ ನಡುವೆ ಗಲಾಟೆ ನಡೆದಿದೆ. ಈ ವೇಳೆ ಗಲಾಟೆ ವಿಕೋಪಕ್ಕೆ ತಿರುಗಿ ಪತಿಯೇ ಪತ್ನಿಯನ್ನು ಕೊಲೆ ಮಾಡಿದ ಘಟನೆ ಶಿವಮೊಗ್ಗದ ವಾದಿ ಎ ಹುದಾ ಎರಡನೇ ಮುಖ್ಯ ರಸ್ತೆ 5ನೇ ಕ್ರಾಸ್ ಮನೆಯಲ್ಲಿ ನಡೆದಿದೆ.
ಇನ್ನು ಕೊಲೆಯಾದ ಪತ್ನಿಯನ್ನು ರುಕ್ಸನ (38) ಎಂದು ತಿಳಿದುಬಂದಿದೆ. ಪತ್ನಿಯನ್ನು ಹತ್ಯೆಗೈದ ಪತಿಯನ್ನು ಯೂಸುಫ್ ಎಂದು ಗುರುತಿಸಲಾಗಿದೆ.ಕಳೆದ 12 ವರ್ಷಗಳ ಹಿಂದೆ ಯೂಸುಫ್ ರುಕ್ಸನಳನ್ನು ಮದುವೆಯಾಗಿದ್ದ. ದಂಪತಿಗಳಿಗೆ ಮೂವರು ಮಕ್ಕಳು ಸಹ ಇದ್ದರು.
ಆದರೆ ಸಂಸಾರದಲ್ಲಿ ಕಲಹದಿಂದ ಆಗಾಗ ಜಗಳ ನಸೆಯುತ್ತಿತ್ತು. ನಿನ್ನೆ ಕೂಡ ಇದೆ ಕೌಟುಂಬಿಕ ಕಲಹಕ್ಕೆ ಗಲಾಟೆ ನಡೆದು ಯೂಸುಫ್ ರುಕ್ಸನಗೆ ಚಾಕುವಿನಿಂದ ಇರಿದು ಕೊಂದಿದ್ದಾನೆ. ಆರೋಪಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದು, ತುಂಗಾ ನಗರ ಠಾಣೆ ಪೋಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.