ಹಾಸನ : ಕಳೆದ ಡಿಸೆಂಬರ್ 31 ರಂದು ಹಾಸನ ನಗರದ ಖಾಸಗಿ ಹೋಟೆಲ್ ಬಳಿ ಮಧ್ಯರಾತ್ರಿ ಹೊಸ ವರ್ಷಚಾರಣೆ ಸಂಭ್ರಮಾಚರಣೆಯ ವೇಳೆ ಪ್ರೀತಿ ನಿರಾಕರಿಸಿದ ಎನ್ನುವ ಕಾರಣಕ್ಕೆ ಯುವಕನ ಮೇಲೆ ಯುವತಿ ಚಾಕು ಇರದಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಪೊಲೀಸರು ಆರೋಪಿ ಯುವತಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಹೌದು ಆರೋಪಿ ಯುವತಿಯನ್ನು ಪೊಲೀಸರು ಇದೀಗ ವಶಕ್ಕೆ ಪಡೆದುಕೊಂಡಿದ್ದಾರೆ. ಯುವತಿಯನ್ನು ವಶಕ್ಕೆ ಪಡೆದುಕೊಂಡು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಡಿಸೆಂಬರ್ 31ರಂದು ಮನುಕುಮಾರ್ ಎನ್ನುವ ಯುವಕನ ಮೇಲೆ ಯುವತಿ ಚಾಕುವಿನಿಂದ ದಾಳಿ ಮಾಡಿದ್ದಳು. ಮನು ಗೆಳತಿಯಿಂದಲೇ ಈ ಒಂದು ಭೀಕರವಾದಂತಹ ಹಲ್ಲೆ ನಡೆದಿತ್ತು. ಹಾಸನದ ಹಿಮ್ಸ್ ಆಸ್ಪತ್ರೆಯಲ್ಲಿ ಸದ್ಯ ಮನುಕುಮಾರ್ ಚಿಕಿತ್ಸೆ ಪಡೆಯುತ್ತಿದ್ದಾನೆ.
ಘಟನೆ ಹಿನ್ನೆಲೆ?
ಹಲ್ಲೆಗೆ ಒಳಗಾದಂತಹ ಮನು ಕುಮಾರ್ ಹಾಗೂ ಆರೋಪಿ ಯುವತಿ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಕಳೆದ ಕೆಲವು ದಿನಗಳಿಂದ ಯುವಕ ಹಾಗೂ ಯುವತಿ ವೈಮನಸಿನಿಂದ ದೂರವಾಗಿದ್ದರು. ಇದೇ ವಿಚಾರವಾಗಿ ಯುವತಿ ಯುವಕ ಮನು ಕುಮಾರ್ ಮೇಲೆ ಕೋಪಗೊಂಡಿದ್ದಳು.ಕಳೆದ ಡಿಸೆಂಬರ್ 31ರಂದು ಮನು ಕುಮಾರ್ ಖಾಸಗಿ ಹೋಟೆಲ್ ನಲ್ಲಿ ಹೊಸ ವರ್ಷಾಚರಣೆ ಆಚರಿಸಲು ಬಂದಿದ್ದಾನೆ.
ಮನು ಕುಮಾರ್ ಹೋಟೆಲ್ ಗೆ ಬಂದಿದ್ದ ಮಾಹಿತಿ ಪಡೆದು ಈಕೆಯೂ ಕೂಡ ಅಲ್ಲಿ ತೆರಳಿದ್ದಾಳೆ. ಈ ವೇಳೆ ಹೋಟೆಲ್‌ನ ಮುಂಭಾಗದಲ್ಲಿ ಇಬ್ಬರು ಪರಸ್ಪರ ಭೇಟಿಯಾಗಿದ್ದು ಗಲಾಟೆ ಮಾಡಿಕೊಂಡಿದ್ದಾರೆ. ಯುವತಿ ಕೂಡಲೇ ಚಾಕುವಿನಿಂದ ಇರದು ಮನು ಕುಮಾರ್ ಮೇಲೆ ಹಲ್ಲೆ ಮಾಡಿದ್ದಾಳೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಹಾಸನದ ಪೊಲೀಸರು ಯುವತಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.