ಹಾಸನ : ಹಾಸನದಲ್ಲಿ ಬೆಚ್ಚಿ ಬೀಳಿಸುವಂತಹ ಘಟನೆ ನಡೆದಿದ್ದು ಪತ್ನಿಯ ಮೇಲೆ ಅನುಮಾನಕ್ಕೆ ಪತಿಯೊಬ್ಬ ಪತ್ನಿಯ ಕತ್ತು ಸಿಳಿ ಭೀಕರವಾಗಿ ಕೊಂದು ಬಳಿಕ ಮನೆಗೆ ಬೇಗ ಹಾಕಿಕೊಂಡು ಪರಾರಿಯಾಗಿರುವ ಘಟನೆ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಕೂಡಿಗೆ ಎಂಬ ಗ್ರಾಮದಲ್ಲಿ ನಡೆದಿದೆ.
ಹೌದು ಕೌಟುಂಬಿಕ ಕಲಹದಿಂದ ಪತ್ನಿ ಕತ್ತು ಸೀಳಿ ಭೀಕರವಾಗಿ ಪತಿ ಕೊಲೆಗೈದಿದ್ದಾನೆ. ಹಾಸನದ ಸಕಲೇಶಪುರದ ಹಿರಿಯೂರು ಕೂಡಿಗೆ ಎಂಬಲ್ಲಿ ಈ ಒಂದು ಕೊಲೆ ನಡೆದಿದೆ. ಪತ್ನಿ ಮಂಜುಳಾಳನ್ನು ಹತ್ಯೆಗೈದ ಬಳಿಕ ಪತಿ ಯೋಗೇಶ್ ಮನೆಗೆ ಬೇಗ ಹಾಕಿ ಪರಾರಿ ಆಗಿದ್ದಾನೆ. ಪತ್ನಿ ಮೇಲಿನ ಅನುಮಾನದಿಂದ ಪತಿ ಹತ್ಯೆಗೈದಿರುವ ಶಂಕೆ ಇದೀಗ ವ್ಯಕ್ತವಾಗುತ್ತಿದೆ. ಘಟನೆ ಕುರಿತು ಸಕಲೇಶಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪತಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.