ಬಾಗಲಕೋಟೆ : ಯಾವುದೇ ವ್ಯಕ್ತಿ ಇನ್ನೊಬ್ಬ ವ್ಯಕ್ತಿಯನ್ನು ಕೊಲೆ ಮಾಡುವ ಹಿಂದಿನ ಉದ್ದೇಶ ಬಹಳ ದೊಡ್ಡದಾಗಿರುತ್ತದೆ. ಆದರೆ ಬಾಗಲಕೋಟೆಯಲ್ಲಿ ಕೇವಲ ಪಲ್ಯ ಮತ್ತು ಸಾಂಬಾರ್ ಮಾಡಲು ಬರಲ್ಲ ಎಂಬ ಕ್ಷುಲಕ ಕಾರಣಕ್ಕೆ ಪತಿಯೊಬ್ಬ ಪತ್ನಿಯ ಕತ್ತು ಹಿಸುಕಿ ಕೊಲೆ ಮಾಡಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಮುಗಳಖೋಡದಲ್ಲಿ ನಡೆದಿದೆ.
ಹೌದು ಬಾಗಲಕೋಟೆಯಲ್ಲಿ ಭೀಕರವಾದ ಕೊಲೆಯಾಗಿದ್ದು ಪತ್ನಿ ಸಾಕ್ಷಿತಾಳನ್ನು ಪತಿ ಬೀರಪ್ಪ ಕೊಲೆ ಮಾಡಿದ್ದಾನೆ. ಪ್ರೀತಿ ಮಾಡಿ ಓಡಿ ಹೋಗಿದ್ದ ಅಂತರ್ಜಾತಿಯ ಜೋಡಿಯನ್ನು ಬಳಿಕ ಹಿರಿಯರು ಸೇರಿಕೊಂಡು ಸಾಕ್ಷಿತ ಮತ್ತು ಬೀರಪ್ಪನ ಮದುವೆ ಮಾಡಿದ್ದರು. ಸದ್ಯ ಆರೋಪಿ ಬೀರಪ್ಪ ಪೂಜಾರಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಪಲ್ಯ ಸಾಂಬಾರ್ ಚೆನ್ನಾಗಿಲ್ಲ ಎಂದು ಪತ್ನಿಯನ್ನು ಭೀಕರವಾಗಿ ಕೊಲೆ ಮಾಡಿದ್ದಾನೆ. ಪತಿ ಪತ್ನಿ ಸಾಕ್ಷಿತಾಳ ಜೊತೆ ಜಗಳ ಮಾಡಿ ಪತ್ನಿಯ ಕತ್ತು ಹಿಸುಕಿ ಕೊಂದಿದ್ದಾನೆ. ಇದೀಗ ಆರೋಪಿ ಬೀರಪ್ಪನನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದೇವೆ ಎಂದು ಬಾಗಲಕೋಟೆ ಜಿಲ್ಲೆಯ ಎಸ್ ಪಿ ಅಮರನಾಥ ರೆಡ್ಡಿ ತಿಳಿಸಿದ್ದಾರೆ.