ಬಳ್ಳಾರಿ : ಪತಿ ಪತ್ನಿಯರ ನಡುವೆ ಕೌಟುಂಬಿಕ ಕಲಹದಿಂದ ಗಲಾಟೆ ನಡೆದಿದೆ. ಈ ವೇಳೆ ಗಲಾಟೆ ವಿಕೋಪಕ್ಕೆ ತಿರುಗಿ ಪತ್ನಿಯನ್ನು ಕೊಂದು ಬಳಿಕ ತಾನು ಕೂಡ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬಳ್ಳಾರಿ ಜಿಲ್ಲೆಯ ಕಂಪ್ಲಿ ತಾಲ್ಲೂಕಿನ ಹೊನ್ನಳ್ಳಿ ಗ್ರಾಮದಲ್ಲಿ ನಡೆದಿದೆ.
ಕೊಲೆಯಾದ ಮಹಿಳೆಯನ್ನು ಹಲಿಮಾ (42) ಹಾಗು ಪತಿ ಖರೀಂ ಸಾಬ್ (45) ಸಾವನ್ನಪ್ಪಿರುವ ದಂಪತಿಗಳು ಎಂದು ತಿಳಿದುಬಂದಿದೆ. ವೈಯಕ್ತಿಕ ವಿಚಾರಗಳಿಗಾಗಿ ದಂಪತಿ ಮಧ್ಯೆ ಆಗಾಗ ಗಲಾಟೆ ನಡೆಯುತ್ತಿತ್ತು.ಬುಧವಾರ ತಡರಾತ್ರಿ ಇಬ್ಬರ ಮಧ್ಯ ಗಲಾಟೆ ನಡೆದಿದೆ.
ಈ ವೇಳೆ ಕೋಪಗೊಂಡಿದ್ದ ಪತಿ ಗುರುವಾರ ಬೆಳಗಿನ ಜಾವ ಪತ್ನಿಯನ್ನು ನೇಣಿಗೆ ಹಾಕಿ ಕೊಂದು ತಾನು ನೇಣು ಹಾಕಿಕೊಂಡು ಮೃತಪಟ್ಟಿದ್ದಾನೆ. ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ ಎಂದು ಕುಡತಿನಿ ಠಾಣೆ ಪೊಲೀಸರು ತಿಳಿಸಿದ್ದಾರೆ.