ಬೆಂಗಳೂರು : ಬೆಂಗಳೂರಲ್ಲಿ ಬೆಚ್ಚಿ ಬೀಳಿಸೋ ಘಟನೆ ನಡೆದಿದ್ದು, ಪತಿಯೋರ್ವ ಪತ್ನಿಯನ್ನು ಕೊಂದು ದೇಹ ಕತ್ತರಿಸಿ ಸೂಟ್ ಕೇಸ್ ಗೆ ತುಂಬಿದ ಘಟನೆ ನಡೆದಿರುವುದು ಬೆಳಕಿಗೆ ಬಂದಿದೆ. ಈ ಒಂದು ಘೋರವಾದ ಘಟನೆ ಬೆಂಗಳೂರಿನ ಹುಳಿಮಾವು ಪೊಲೀಸ್ ಠಾಣಾ ವ್ಯಾಪ್ತಿಯ ದೊಡ್ಡಕನ್ನಹಳ್ಳಿಯಲ್ಲಿ ನಡೆದಿದೆ.ಕೊಲೆಯಾದ ಪತ್ನಿಯನ್ನು ಗೌರಿ ಎಂದು ತಿಳಿದುಬಂದಿದ್ದು, ಇನ್ನು ಪತ್ನಿಯನ್ನು ಕೊಂದ ಪಾಪಿ ಪತಿಯನ್ನು ರಾಕೇಶ್ ಎಂದು ತಿಳಿದುಬಂದಿದೆ.
ಮಹಾರಾಷ್ಟ್ರ ಮೂಲದ ಪತಿ ಈ ಒಂದು ಕೃತ್ಯ ಎಸಗೀರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಬೆಂಗಳೂರಿನ ಹುಳಿಮಾವು ಎಂಬಲ್ಲಿ ಒಂದು ಘಟನೆ ನಡೆದಿದ್ದು, ಮಹಾರಾಷ್ಟ್ರದಲ್ಲಿರುವ ಪತ್ನಿ ಪೋಷಕರಿಗೆ ಪತಿ ಈ ಕುರಿತು ಕರೆ ಮಾಡಿ ಹೇಳಿದ್ದಾನೇ ಎನ್ನಲಾಗಿದೆ. ಕೊಲೆಯಾದ ಮಹಿಳೆ ಪೋಷಕರಿಂದ ತಕ್ಷಣ ಸ್ಥಳಿಯ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಮಹಾರಾಷ್ಟ್ರ ಪೊಲೀಸ್ರ ಮಾಹಿತಿಯನ್ನು ಆಧರಿಸಿ ಹುಳಿಮಾವು ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ದೊಡ್ಡಕನ್ನಹಳ್ಳಿಯ ಮನೆಗೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.